
ಪ್ರವಾಹಕ್ಕೆ ಸಿಲುಕಿರುವ ಕರ್ನಾಟಕದಲ್ಲಿ ಸರ್ಕಾರ ಅಸ್ತಿತ್ವದಲ್ಲಿದ್ದರೂ ಸಚಿವ ಸಂಪುಟವಿಲ್ಲದೇ ಸಿಎಂ ಟೀಕೆಗೆ ಗ್ರಾಸವಾಗಿದ್ದಾರೆ. ರಾಜ್ಯದ 16 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಚಿವ ಸಂಪುಟವಿಲ್ಲದ ಕಾರಣ ಅಧಿಕಾರಿಗಳು ಆಡಿದ್ದೇ ಆಟ ಎಂಬಂತಾಗಿದೆ. ಹೀಗಾಗಿ ಬಿಎಸ್ವೈ ವಿರೋಧ ಪಕ್ಷಗಳ ಟೀಕೆಗೂ ಗುರಿಯಾಗಿದ್ದು, ಇದಕ್ಕೆಲ್ಲ ಉತ್ತರ ಎಂಬಂತೆ ಇನ್ನೆರಡೇ ದಿನಗಳಲ್ಲಿ ಸಂಪುಟ ಅಸ್ತಿತ್ವಕ್ಕೆ ತರಲು ಬಿಜೆಪಿ ಸಿದ್ಧತೆ ನಡೆಸಿದೆ.
ಇದೇ ಬರುವ ಅಗಸ್ಟ್ 14 ರಂದು ಹೈಕಮಾಂಡ್ ಸೂಚನೆಯಂತೆ 12 ಬಿಜೆಪಿಯ ಹಿರಿಯ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಮಿತ್ ಶಾ ತುರ್ತಾಗಿ 12 ಹಿರಿಯ ಶಾಸಕರೊಂದಿಗೆ ಸಚಿವ ಸಂಪುಟ ರಚಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಹಾಗೂ ಅಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬಿಎಸ್ವೈ ತರಾತುರಿಯಲ್ಲಿ ಸಚಿವ ಸಂಪುಟ ರಚಿಸಲು ಹೊರಟಿದ್ದಾರೆ. ಶಾ ಸೂಚನೆಯಂತೆ ಮೊದಲ ಹಂತದಲ್ಲಿ ಆರ್.ಅಶೋಕ್, ಡಾ.ಅಶ್ವಥ್ ನಾರಾಯಣ, ವಿ.ಸೋಮಣ್ಣ, ಬಾಲಚಂದ್ರ ಜಾರಕಿಹೊಳಿ-,ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ನೆಹರು ಓಲೇಕಾರ್,ಶಂಕರ್ ಮುನೇನಕೊಪ್ಪ, ಶ್ರೀ ರಾಮುಲು, ಎಸ್.ಅಂಗಾರ, ಅರವಿಂದ ಲಿಂಬಾವಳಿಗೆ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Comments are closed.