ಕರಾವಳಿ

ದೋಣಿಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಿದ ಶಾಸಕ ಕಾಮತ್ – ಜಪ್ಪಿನಮೊಗರು ಗಂಜಿಕೇಂದ್ರಕೆ ಭೇಟಿ 

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರದ ಜಪ್ಪಿನಮೊಗರು ಪ್ರದೇಶದಲ್ಲಿ ವಿಪರೀತ ಮಳೆಯಿಂದ ಶನಿವಾರ ಹಾಗೂ ರವಿವಾರ ನೆರೆ ಪರಿಸ್ಥಿತಿ ಉದ್ಭವವಾಗಿದ್ದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಜಪ್ಪಿನಮೊಗರುವಿನ ಗಣೇಶ್ ನಗರ, ಕಡೆಕಾರ್ , ಹೊಯಿಗೆ ರಾಶಿ ಸಹಿತ ಆ ಪರಿಸರದ ಅನೇಕ ಪ್ರದೇಶಗಳಿಗೆ ಶಾಸಕ ಕಾಮತ್ ಭೇಟಿ ನೀಡಿದರು.

ಕೆಲವು ಕಡೆ ವಿಪರೀತ ಮಳೆನೀರಿನಿಂದ ನಡೆದಾಡಲು ಅಸಾಧ್ಯವಾಗಿರುವ ಕಡೆ ಶಾಸಕರು ದೋಣಿಯ ಮೂಲಕ ಸಂತ್ರಸ್ತರು ಇರುವಲ್ಲಿಗೆ ತಲುಪಿ ಸಹಾಯಹಸ್ತ ಚಾಚಿದರು. ಅನೇಕ ಕಡೆ ನೀರು ರಸ್ತೆಯ ಮೇಲೆನೆ ಹರಿಯುತ್ತಿದ್ದು ಶಾಸಕರು ಮಳೆಯ ಆರ್ಭಟದ ನಡುವೆ  ಪಂಜಿಮೊಗರುವಿನ ನೆರೆಪೀಡಿತ ಪ್ರದೇಶಗಳಲ್ಲಿ ಸಂಚರಿಸಿ ಜನತ ಸಂಕಷ್ಟವನ್ನು ಕೇಳಿದರು. ಆ ಬಳಿಕ ಅಧಿಕಾರಿಗಳಿಗೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸೂಚನೆ ನೀಡಿದರು.

ಅದರ ಬಳಿಕ ಜಪ್ಪಿನಮೊಗರುವಿನ ಗಂಜಿಕೇಂದ್ರಕ್ಕೆ ಭೇಟಿ ನೀಡಿದ ಶಾಸಕ ಕಾಮತ್ ಸಂತ್ರಸ್ತರಿಗೆ ಅಲ್ಲಿ ಸೌಲಭ್ಯಗಳು ದೊರಕುತ್ತಿರುವುದರ ಬಗ್ಗೆ ಪರಿಶೀಲಿಸಿದರು. ಅಲ್ಲಿ ಪೊಲೀಸ್ ಜಂಟಿ ಆಯುಕ್ತ ಹನುಮಂತರಾಯ ಅವರೊಂದಿಗೆ ಮಾಹಿತಿ ಪಡೆದು ಅಗತ್ಯ ಕ್ರಮಗಳ ಸಮಾಲೋಚನೆ ನಡೆಸಿದರು.

ಆ ಬಳಿಕ ಶಾಸಕ ಕಾಮತ್ ಮುಳಿಹಿತ್ಲು ಫೇರಿ ರಸ್ತೆ ಪರಿಸರಕ್ಕೆ ಭೇಟಿ ನೀಡಿದರು. ಶಾಸಕರೊಂದಿಗೆ ಮನಪಾ ಮಾಜಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುರೇಂದ್ರ, ಬಿಜೆಪಿ ಮುಖಂಡ ವಸಂತ ಜೆ ಪೂಜಾರಿ ಸಹಿತ ಅನೇಕ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Comments are closed.