ಕರಾವಳಿ

ಹರಿಯಾಣದಿಂದ ಕೇರಳಕ್ಕೆ ಅಕ್ರಮ ಗೋಸಾಗಾಟ : ಮಂಗಳೂರು ಪೊಲೀಸರಿಂದ ಹಸುಗಳ ಸಹಿತಾ ಲಾರಿ ವಶ

Pinterest LinkedIn Tumblr

ಮಂಗಳೂರು, ಆಗಸ್ಟ್,10 : ಜಿಲ್ಲೆಯಲ್ಲಿ ಗಲಭೆಗೆ ಕಾರಣವಾಗುತ್ತಿರುವ ಅಕ್ರಮ ಗೋಸಾಗಾಟ ನಿಯಂತ್ರಣ ಸೇರಿದಂತೆ ಗೋ ಸಾಗಾಟದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವು ರೀತಿಯ ಕಠಿಣ ಕಾನೂನು ಕ್ರಮಗಳಿಗೆ ಮುಂದಾಗಿದ್ದರೂ.. ಅಕ್ರಮ ಗೋಸಾಗಾಟ ಮಾತ್ರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ.

ಇದಕ್ಕೆ ಪೂರಕವೆಂಬಂತೆ ಹೊರ ರಾಜ್ಯವಾದ ಹರಿಯಾಣದಿಂದ ಕೇರಳದ ಕ್ಯಾಲಿಕಟ್ ವರೆಗೆ ದ.ಕ.ಜಿಲ್ಲೆಯ ಮೂಲಕ ಹಸುಗಳ ಅಕ್ರಮ ಸಾಗಾಟ ವ್ಯಾಪಕವಾಗಿ ನಡೆಯುತ್ತಿದ್ದು, ಇಂತಹ ಅಕ್ರಮ ಗೋಸಾಗಾಟದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರುಇಂದು ಕಾರ್ಯಾಚರಣೆ ನಡೆಸಿ, ಹಲವಾರು ಗೋವುಗಳನು ಅಕ್ರಮವಾಗಿ ಸಾಗಿಸುತ್ತಿದ್ದ ಹರಿಯಾಣದ ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

ಅಕ್ರಮ ಗೋ ಸಾಗಾಟ ತಡೆಗೆ ಮೊಬೈಲ್ ಆ್ಯಪ್ :

ಈಗಾಗಲೇ ಅಕ್ರಮ ಗೋ ಸಾಗಾಟದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮೊಬೈಲ್ ಆ್ಯಪ್ ಅನ್ನು ಹೊರತಂದಿದೆ.ದಕ್ಷಿಣ ಕನ್ನಡ ಜಿಲ್ಲಾಡಳಿತ ಮರಳು ಸಾಗಾಟಕ್ಕೆ ಸ್ಯಾಂಡ್ ಬಝಾರ್ ಬಳಿಕ, ಅಕ್ರಮ ಸಾಗಾಟ ತಡೆಗಾಗಿ ಲೈವ್‌ಸ್ಟಾಕ್ ಲಾಜಿಸ್ಟಿಕ್ ಎಂಬ ಕಂಟ್ರೋಲ್ ಆ್ಯಪ್ ರೂಪಿಸಿದೆ. ಜಿಲ್ಲೆಯಲ್ಲಿ ಜಾನುವಾರುಗಳ ಅಧಿಕೃತ ಸಾಗಾಟಕ್ಕೆ ಕಾನೂನಿನ ಸಹಕಾರ ಒದಗಿಸುಲು ಜಿಲ್ಲಾಡಳಿತ ಆ್ಯಪ್ ಸಿದ್ಧಪಡಿಸಿದೆ. ಇದಕ್ಕೆ ಎಲ್‌ಎಲ್‌ಸಿ (ಲೈವ್‌ಸ್ಟಾಕ್ ಲಾಜಿಸ್ಟಿಕ್ಸ್ ಕಂಟ್ರೋಲ್) ಆ್ಯಪ್ ಎಂದು ಹೆಸರಿಸಲಾಗಿದೆ.

‘ಎಲ್‌ಎಲ್‌ಸಿ’ ಹೆಸರಿನ ಮೊಬೈಲ್ ಆಧಾರಿತ ಈ ಆಯಪನ್ನು ಗೋ ಸಾಗಾಟಗಾರರು ಡೌನ್‌ಲೋಡ್ ಮಾಡಿಕೊಂಡು ಗೋ ಸಾಗಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬಹುದು. ಇದು ಇದು ಯಾವುದೇ ರೀತಿಯಲ್ಲಿ ಗೋ ಸಾಗಾಟಕ್ಕೆ ಸಮ್ಮತಿ ಅಲ್ಲ. ಆದರೆ ಸಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಖಾತರಿ ಪಡಿಸಲು ಸಾಗಾಟದಾರರು ನೀಡುವ ಮಾಹಿತಿಯಾಗಿರುತ್ತದೆ.

ಸದ್ಯ ಮಾಹಿತಿಯನ್ನು ನೀಡವುದಕ್ಕಾಗಿ ಮಾತ್ರವೇ ಈ ಆಯಪ್ ಬಳಕೆಯಾಗಲಿದ್ದು, ಮುಂದೆ ಈ ಆಯಪ್‌ನಲ್ಲಿ ಜಿಪಿಎಸ್ ಸಹಾಯದಿಂದ ವಾಹನಗಳ ಸಾಗಾಟದ ಮೇಲೆ ನಿಗಾ ವಹಿಸುವಂತಹ ಇತರ ಸೌಲಭ್ಯಗಳಿಗೂ ಸಹಕಾರಿಯಾಗಲಿದೆ. ಮಾತ್ರವಲ್ಲದೆ, ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು, ಫೋಟೋಗಳನ್ನು ಕೂಡಾ ಇದರಲ್ಲಿ ಅಪ್‌ಲೋಡ್ ಮಾಡುವ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಈಗಾಗಲೇ ಸಾಗಾಟ ಮಾಡುವವರನ್ನು ಕರೆಯಿಸಿ ಮಾತುಕತೆ ನಡೆಸಲಾಗಿದೆ.

ಕಾನೂನು ರೀತಿಯಲ್ಲಿ ಗೋವುಗಳ ಸಾಗಾಟ ಮಾಡುವವರು ಎಲ್ಲಿಂದ ಎಲ್ಲಿಗೆ, ಯಾರಿಂದ ಗೋವುಗಳನ್ನು ಸಾಗಾಟ ಮಾಡುತ್ತಾರೆ ಎಂಬ ಮಾಹಿತಿಯು ಈ ಆಯಪ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಕಾನೂನು ಬದ್ಧವಾಗಿ ಸಾಗಾಟ ಮಾಡುವವರಿಗೆ ಇದರಿಂದ ಸಹಕಾರಿಯಾಗಲಿದೆ. ಸದ್ಯ ಲಿಂಕ್ ಮೂಲಕ ಸಾಗಾಟಗಾರರಿಗೆ ಈ ಆಯಪ್ ಲಭ್ಯವಾಗಲಿದೆ.

ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿ ಖಾನೆ ಕಂಡು ಬಂದರೆ ಅಧಿಕಾರಿಗಳ ಗಮನಕ್ಕೆ ತರಬೇಕು, ಜಿಲ್ಲಾಡಳಿತದ ನಿಯಂತ್ರಣ ಕೊಠಡಿ (1077) ದಿನದ 24 ಗಂಟೆ ಕಾರ್ಯನಿರತವಾಗಿದೆ. ಅಲ್ಲಿಗೆ ಮಾಹಿತಿ ನೀಡಿದರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಕ್ರಮ ಜರುಗಿಸುತ್ತಾರೆ. ಪೊಲೀಸ್ ನಿಯಂತ್ರಣ ಕೊಠಡಿಗೂ(100) ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.

Comments are closed.