
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಂದ್ರಯಾನ-2, ವಿಕ್ರಮ್ ಲ್ಯಾಂಡರ್ ಭೂಮಿಯನ್ನು ಸೆರೆಹಿಡಿದಿರುವ ಮೊದಲ ಚಿತ್ರವನ್ನು ಆಗಸ್ಟ್ 4ರಂದು ಹರಿಬಿಟ್ಟಿದೆ. ಈ ಚಿತ್ರ ಕ್ಲಿಕ್ ಮಾಡಲು ಎಲ್ಐ4 ಕ್ಯಾಮೆರಾವನ್ನು ಬಳಸಿಕೊಂಡಿದ್ದು ಆಗಸ್ಟ್ 3, 2019 ಸುಮಾರು ರಾತ್ರಿ 11ಗಂಟೆಗೆ ವೇಳೆಯಲ್ಲಿ ಸೆರೆಹಿಡಿಯಲಾಗಿದೆ.
ಇಸ್ರೋ ವೆಬ್ಸೈಟ್ನಲ್ಲಿ 2450 ಕಿ.ಮೀ, 3200 ಕಿ.ಮೀ, 4100 ಕಿ.ಮೀ, 4700 ಕಿ.ಮೀ ಮತ್ತು ಭೂಮಿಯಿಂದ 5000 ಕಿ.ಮೀ ಎತ್ತರದಿಂದ ತೆಗೆದ ಕೆಲವು ಚಿತ್ರಗಳನ್ನು ಸಹ ಪ್ರಕಟಣೆ ಮಾಡಿದೆ.
ಆಗಸ್ಟ್ 2ರ ಮಧ್ಯಾಹ್ನ, ಚಂದ್ರಯಾನ-2ಗೆ ನಾಲ್ಕನೇ ಕಕ್ಷೆಯನ್ನು ನಿಗದಿ ಮಾಡಿದಂತೆ ಏರಿಕೆಯಾಯಿತು. ಇದರೊಂದಿಗೆ ಬಾಹ್ಯಾಕಾಶ ನೌಕೆ 277 ಕಿಮೀ x 89,472 ಕಿಮೀ ಅಂಡಾಕಾರದ ಕಕ್ಷೆಯಲ್ಲಿ ಭೂಮಿಯ ಸುತ್ತಲೂ ಹೋಗುತ್ತಿದ್ದು. ಇದರ ಎಲ್ಲಾ ನಿಯತಾಂಕಗಳು ಸಾಮಾನ್ಯವಾಗಿದೆ (All its parameters are normal) ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನವೀಕರಣದಲ್ಲಿ ತಿಳಿಸಿದೆ.
ಇದು ಆಗಸ್ಟ್ 14ರ ವರೆಗೆ ಭೂಮಿಯ ಸುತ್ತ ಪರಿಭ್ರಮಿಸುವುದನ್ನು ಮುಂದುವರಿಸುತ್ತದೆ. ಅಷ್ಟರಲ್ಲಿ ಇದು ಆಗಸ್ಟ್ 6ರಂದು ಮಧ್ಯಾಹ್ನ 2.30ರಿಂದ 3.30ರ ನಡುವೆ ತನ್ನ ಅಂತಿಮ ಕಕ್ಷೆಯ ಕುಶಲತೆಗೆ ಒಳಗಾಗುತ್ತದೆ.
ಚಂದ್ರಯಾನ -2 ಆಗಸ್ಟ್ 20ರಂದು ಚಂದ್ರನನ್ನು ತಲುಪಲಿದೆ ಮತ್ತು ಮತ್ತೊಂದು ಸುತ್ತಿನ ಕಕ್ಷೆಯ ಹೊಂದಾಣಿಕೆಗೆ ಒಳಗಾಗಲಿದೆ. ಲ್ಯಾಂಡಿಂಗ್ ದಿನದಂದು, ದಕ್ಷಿಣ ಧ್ರುವದ ಬಳಿ ಲ್ಯಾಂಡರ್-ರೋವರ್ ಜೋಡಿಯು ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಿಕೊಳ್ಳಲು ನಾವು 15 ನಿಮಿಷಗಳು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಅವಶ್ಯಕತೆ ಎದುರಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಶಿವನ್ ಅವರು ತಿಳಿಸಿದ್ದಾರೆ. ಏಕೆಂದರೆ ಮೃದು-ಲ್ಯಾಂಡಿಂಗ್ಅನ್ನು ಕಾರ್ಯಗತಗೊಳಿಸುವುದು ನಮಗೆ ಹೊಸದು ಮತ್ತು ಎಲ್ಲವೂ ಯೋಜನೆಯ ಪ್ರಕಾರ ಹೋಗಿ ಪರಿಪೂರ್ಣವಾಗಿರಬೇಕು ಎಂದು ಅವರು ಹೇಳಿದರು.
ಚಂದ್ರಯಾನ -2 ಜುಲೈ 22ರಂದು ಮಧ್ಯಾಹ್ನ 2.43ಕ್ಕೆ ಆಂಧ್ರದ ಶ್ರೀ ಹರಿಕೋಟಾ ಬ್ಯಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಯಿತು. ಇದಕ್ಕೂ ಮುಂಚೆ ಜುಲೈ 15ರಂದು ನಿಗದಿಯಾಗಿದ್ದ ಉಡಾವಣೆಯನ್ನು ರಾಕೆಟ್ ಟೇಕಾಫ್ ಮಾಡಲು ಒಂದು ಗಂಟೆ ಮೊದಲು ನಿಲ್ಲಿಸಬೇಕಾಯಿತು, ಇದಕ್ಕೆ ಇಸ್ರೋ ತಾಂತ್ರಿಕ ಅಡ-ತಡೆಗಳು ಕಾರಣವಾಗಿತ್ತು.
Comments are closed.