ಕರಾವಳಿ

ಗಂಗೊಳ್ಳಿಯಲ್ಲಿ ಗಾಳಿ ಮಳೆಗೆ ಕುಸಿದ ಮನೆ: ಪರಿಹಾರ ಹಸ್ತಾಂತರ

Pinterest LinkedIn Tumblr

ಕುಂದಾಪುರ: ಗಂಗೊಳ್ಳಿ ಗ್ರಾಮದ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಬಳಿಯ ನಿವಾಸಿ ನಾಗರಾಜ ಖಾರ್ವಿ ಎಂಬುವರ ಮನೆಯು ಸೋಮವಾರ ಸುರಿದ ಭಾರಿ ಗಾಳಿ ಮಳೆಗೆ ಕುಸಿದು ಬಿದ್ದಿದ್ದು, ಸರಕಾರದಿಂದ ಮಂಜೂರಾದ ಪರಿಹಾರವನ್ನು ಗುರುವಾರ ವಿತರಿಸಲಾಯಿತು.

ಗಂಗೊಳ್ಳಿಗೆ ಗುರುವಾರ ಭೇಟಿ ನೀಡಿದ ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ಅವರು ಪರಿಹಾರ 95 ಸಾವಿರ ರೂ.ಗಳ ಚೆಕ್‌ನ್ನು ನಾಗರಾಜ ಖಾರ್ವಿ ಅವರಿಗೆ ಹಸ್ತಾಂತರಿಸಿದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಗ್ರಾಪಂ ಸದಸ್ಯ ನಾಗರಾಜ ಖಾರ್ವಿ, ಬಿ.ರಾಘವೇಂದ್ರ ಪೈ, ಗಂಗೊಳ್ಳಿ ಗ್ರಾಮ ಕರಣಿಕ ರಾಘವೇಂದ್ರ ದೇವಾಡಿಗ, ಗುಜ್ಜಾಡಿ ಗ್ರಾಮಕರಣಿಕ ಸೋಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Comments are closed.