ಉಡುಪಿ: ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 560 ಅಂಕಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಕೆ.ಸೃಷ್ಟಿ ಆರ್ ಶೆಟ್ಟಿ ಇವರಿಗೆ ಜಯಕರ್ನಾಟಕ ಉಡುಪಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷರಾದ ಸತೀಶ್ ಪೂಜಾರಿ ಅವರ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮವು ಶಿರಿಯಾರ ಸಮೀಪದ ಎತ್ತಿನಟ್ಟಿಯಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ವತಿಯಿಂದ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಆರ್ಥಿಕ ನೆರವನ್ನು ನೀಡಲಾಯಿತು.

ಜಿಲ್ಲಾ ಗೌರವ ಸಲಹೆಗಾರ ಸುಧಾಕರ ರಾವ್ ಬಾರ್ಕೂರು, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಅಮೀನ್, ಕಾರ್ಯಾಧ್ಯಕ್ಷ ಶರತ್ ಶೆಟ್ಟಿ, ಹೋರಾಟ ಸಮಿತಿ ಅಧ್ಯಕ್ಷ ಕರುಣಾಕರ ಪೂಜಾರಿ, ಜಿಲ್ಲಾ ಸಮಿತಿಯ ವಿವೇಕ ಕಲ್ಮಾಡಿ, ನಿತಿನ್ ಕೋಟ, ಅರುಣ್, ಕಿರಣ್, ಶಿರಿಯಾರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಕಾಶ ಶೆಟ್ಟಿ ಪಡುಮುಂಡು, ವಕೀಲರಾದ ಪ್ರದೀಪ್ ಶೆಟ್ಟಿ ಕೊಳ್ಕೆಬೈಲ್, ಸ.ಹಿ.ಪ್ರಾಥಮಿಕ ಶಾಲೆ ಶಿರಿಯಾರದ ಮುಖ್ಯೋಪಾಧ್ಯಾಯ ರಾದ ಸಾಧು ಶೇರಿಗಾರ, ಶಿರಿಯಾರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಕಾಂಚನ್, ಗ್ರಾಮ ಪಂಚಾಯತ್ ಸದಸ್ಯ ಸುಧೀಂದ್ರ ಶೆಟ್ಟಿ, ವಿಧ್ಯಾರ್ಥಿನಿಯ ತಾಯಿ ಸ್ಮಿತಾ ಆರ್ ಶೆಟ್ಟಿ, ಶಾಲಿನಿ ಎ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
Comments are closed.