
ಬೆಂಗಳೂರು: ನನ್ನ 45 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇಂತಹ ರಾಜಕಾರಣ ನೋಡಿಲ್ಲ, ಒಳ್ಳೆ ಮಂಗನಾಟದಂತೆ ಆಡುತ್ತಿದ್ದಾರೆ ಬಿಜೆಪಿಯವರು ಎಂದು ಮಾಜಿ ಸಚಿವ ಎಸ್.ಆರ್ ಪಾಟೀಲ್ ಅವರು ಗುರುವಾರ ತಿಳಿಸಿದರು.
ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಆಪರೇಷನ್ ಕಮಲದ ಮೂಲಕ ಪ್ರಜಾಪ್ರಭುತ್ವಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಆಪರೇಷನ್ ಕಮಲದಿಂದ ಬಿಜೆಪಿಯವರ ಪರಿಸ್ಥಿತಿ ನೆಟ್ಟಗಾಗಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಅತೃಪ್ತ ಶಾಸಕರ ಅನರ್ಹತೆ ವಿಚಾರ ಸ್ಪೀಕರ್ ಅಂಗಳದಲ್ಲಿದೆ. ಸ್ಪೀಕರ್ ತೀರ್ಮಾನವೇ ಅಂತಿಮವಾಗಿದ್ದು, ಬಿಜೆಪಿಯವರ ಪರಿಸ್ಥಿತಿ ನೆನಸಿಕೊಂಡ್ರೆ ಮರುಕವಾಗುತ್ತೆ, ಅವರಿಂದ ಸ್ಥಿರ ಸರ್ಕಾರ ನೀಡಲು ಸಾಧ್ಯವಿಲ್ಲ, ಜೊತೆಗೆ ರಾಜ್ಯದ ಅಭಿವೃದ್ಧಿ ಕನಸಿನ ಮಾತು ಎಂದು ಅವರು ಹೇಳಿದರು.
ಸದ್ಯ ಬಿಜೆಪಿ ಇಂತಹ ದೊಡ್ಡ ಸಾಹಸಕ್ಕೆ ಇಳಿಯಬಾರದಿತ್ತು ಅವರು ಮಾಡಿದ ಪಾಪಕ್ಕೆ ಶಿಕ್ಷೆಯಾಗುತ್ತೆ, ವಿಶ್ವಾಸ ಮತಯಾಚನೆ ಮುನ್ನವೇ ಕೋಟು ಸೂಟು ರೆಡಿಯಾಗಿತ್ತು. ಮುಖ್ಯಮಂತ್ರಿ, ಸಚಿವರಾಗಲು ಸಿದ್ದವಾಗಿದ್ರು, ಪ್ರಮಾಣ ವಚನ ಸ್ವೀಕರಿಸಲು ತುದಿಗಾಲಲ್ಲಿ ನಿಂತಿದರು. ಆದರೆ, ಇದುವರೆಗೂ ಸರ್ಕಾರವೇ ರಚನೆಯಾಗಲಿಲ್ಲ ಎಂದು ಮಾಜಿ ಸಚಿವ ಎಸ್.ಆರ್ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Comments are closed.