
ಬೆಂಗಳೂರು: ಸಚಿವ ಆರ್ ಶಂಕರ್ಗೆ ಸ್ಪೀಕರ್ ರಮೇಶ್ ಕುಮಾರ್ ನೋಟಿಸ್ ಜಾರಿ ಮಾಡಿದ್ದು, ಕಾಂಗ್ರೆಸ್ ಜೊತೆ ವಿಲೀನಗೊಂಡಿರುವ ಬಗ್ಗೆ ತಿಳಿಸಿದ್ದೀರಾ, ವಿಲೀನದ ನಿರ್ಣಯವನ್ನ ನಿಮ್ಮ ಪಕ್ಷದ ವತಿಯಿಂದ ಕಳಿಸಿ ಎಂದು ಹೇಳಾಗಿದೆ.
ಅಲ್ಲದೇ ಪತ್ರದ ಜೊತೆಗೆ ವಿಲೀನಗೊಂಡಿರುವ ಬಗ್ಗೆ ಯಾವುದೇ ಅಗತ್ಯ ದಾಖಲೆಗಳಿಲ್ಲ, ಕಾನೂನಿನ ಮೇಲೆ ನಂಬಿಕೆಯಿದ್ದರೆ ದಾಖಲೆ ಸಲ್ಲಿಸಿ ಎಂದು ಸಚಿವ ಆರ್ ಶಂಕರ್ ಅವರಿಗೆ ನೋಟಿಸ್ನಲ್ಲಿ ತಿಳಿಸಲಾಗಿದೆ.
ಇನ್ನು ಈ ಸಂಬಂಧ ನಾಳೆ ಆರ್.ಶಂಕರ್ ಶಾಸಕ ಸ್ಥಾನ ಅನರ್ಹ ಸಾಧ್ಯತೆಯಿದ್ದು, ವಿಲೀನಗೊಳಿಸುವಲ್ಲಿ ನಮ್ಮ ಅನುಮತಿ ಪಡೆದಿಲ್ಲ ಎಂದು ಕೆಪಿಜೆಪಿ( ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಅಧ್ಯಕ್ಷ ಮಹೇಶ್ ಗೌಡ ಅವರು ದೂರು ನೀಡಿದ ಪರಿಣಾಮವಾಗಿ ಸಚಿವ ಶಂಕರ್ ಅವರಿಗೆ ಸ್ಪೀಕರ್ ನೋಟಿಸ್ ಜಾರಿ ಮಾಡಿದ್ದಾರೆ.
Comments are closed.