ಕರ್ನಾಟಕ

ಪಕ್ಷದ ಅಧ್ಯಕ್ಷ ಪೇಪರ್​ ಟೈಗರ್ ಎಂದು​ ಈಶ್ವರಪ್ಪ ಹೇಳಿದ್ದು ಯಾರಿಗೆ ಗೊತ್ತಾ?

Pinterest LinkedIn Tumblr


ಬೆಂಗಳೂರು: ಮಾನ ಮರ್ಯಾದೆ ಇದ್ದಿದ್ರೆ ಗುರುವಾರದ ತನಕ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಕಾಲವಕಾಶ ಕೇಳಬಾರದಿತ್ತು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​ ಈಶ್ವರಪ್ಪ ಅವರು ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಏಕೆ ಗುರುವಾರದವರೆಗೂ ಅವಕಾಶ ಕೇಳ್ತಾರೆ. ಅತೃಪ್ತ ಶಾಸಕರಿಗೆ ಆಸೆ ಆಮಿಷ ತೋರಿಸಿ, ಮಂತ್ರಿ ಸ್ಥಾನ ಕೊಡಲು ಚಿಂತನೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.
ಇನ್ನು ನಾವು ಆಪರೇಷನ್ ಕಮಲ ಮಾಡುತ್ತಿದ್ದೇವೆ ಅಂತಿದ್ದಾರೆ. ಅದನ್ನ ಮಾಡಿ ತೋರಿಸಲಿ. ಕಾಂಗ್ರೆಸ್, ಜೆಡಿಎಸ್ ನವರು ರಾಜ್ಯದ ಜನರ ಮುಂದೆ ಬಹಿರಂಗ ಕ್ಷಮೆ ಕೇಳಬೇಕು ಎಂದರು.

ಸದ್ಯ ಸಿಎಂ, ಜಿಡಬ್ಲ್ಯೂಡಿ ಸಚಿವರು ನಮಗೆ ಮರ್ಯಾದೆ ಕೊಡುತ್ತಿಲ್ಲ ಅನ್ನೋ ಆರೋಪವಿದೆ. ಕುಮಾರಸ್ವಾಮಿ ಅವರು ಗುರುವಾರದವರೆಗೂ ಕಾಯದೆ, ಕೂಡಲೇ ರಾಜೀನಾಮೆ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಅಲ್ಲದೇ ಅತೃಪ್ತ ಶಾಸಕರ ವಿಮಾನ ವೆಚ್ಚ ವಿಚಾರವಾಗಿ ಮಾತನಾಡಿದ ಈಶ್ವಪ್ಪನವರು, ಅಶೋಕ್, ಮತ್ತೊಬ್ಬರು ಇದ್ದರು ಅನ್ನೋದು ಬೇರೆ ವಿಚಾರವಾಗಿದೆ. ಎಲ್ಲಾ ಶಾಸಕರೂ ನಮ್ಮ ಸ್ನೇಹಿತರೇ, ಸದ್ಯ ರೆಸಾರ್ಟ್ ರಾಜಕೀಯ ಮಾಡ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ, ದಿನೇಶ ಗುಂಡೂರಾವ್​ ಶಕ್ತಿ ಇಲ್ಲದ ಪಕ್ಷದ ಅಧ್ಯಕ್ಷ, ಪೇಪರ್​ ಟೈಗರ್ ಅವರ ಮಾತಿಗೆ ಬೆಲೆಯಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ಹೇಳಿದರು.

Comments are closed.