ಕರ್ನಾಟಕ

ಸಮ್ಮಿಶ್ರ ಸರ್ಕಾರದ ಈ ಸ್ಥಿತಿಗೆ ರೇವಣ್ಣ ಕಾರಣ

Pinterest LinkedIn Tumblr


ತುಮಕೂರು: ಸರ್ಕಾರದ ಈ ಸ್ಥಿತಿಗೆ ರೇವಣ್ಣ ಕಾರಣ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವ್ರು ರೇವಣ್ಣ ಅಲ್ಲಾ ರಾವಣ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಣ ಸವದಿ ಭೇಟಿ ನಂತರ ಮಾತನಾಡಿದ ರಾಜಣ್ಣ, ನಾನು- ಸವದಿ 25 ವರ್ಷಗಳ ಸ್ನೇಹಿತರು. ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಬಂದು ನನ್ನನ್ನ ಭೇಟಿ ಮಾಡಿದ್ದಾರೆ. ಸೌಜನ್ಯಯುತ ಭೇಟಿಗೆ ಯಾವುದೇ ರಾಜಕೀಯ ಲೇಪನ ಬೇಡ ಎಂದಿದ್ದಾರೆ.

ಇನ್ನು ಸಿಎಂ ಬಹುಮತ ಸಾಬೀತು ಪಡಿಸುವ ವಿಚಾರ ಕುರಿತು ಮಾತನಾಡಿದ ರಾಜಣ್ಣ, ರಾಜ್ಯದಲ್ಲಿ ಸರ್ಕಾರವೇ ಇಲ್ಲಾ. ವಿಶ್ವಾಸ ಮತ ಸಾಬೀತು ಹೇಗಾಗತ್ತೆ..? ಸರ್ಕಾರವೇ ಇಲ್ಲ ಅಂದ್ಮೆಲೆ ಬಹುಮತ ಸಾಬೀತಿನ ಫಲಿತಾಂಶ ಯಾಕೆ ಕೇಳ್ತಿರಾ? ಚುನಾವಣೆಯಲ್ಲಿ ನಿಲ್ಲೋ ಎಲ್ಲರೂ ಗೆಲ್ತೀವೆ ಅಂತಲೇ ಹೇಳೋದು. ಸೋಲ್ತೀವಿ ಅಂತಾ ಯಾರೂ ಹೇಳಲ್ಲಾ. ಫಲಿತಾಂಶ ಬಂದ್ಮೇಲೆ ಯಾರು ಸೋಲ್ತಾರೆ ಯಾರು ಗೆಲ್ತಾರೆ ಅಂತಾ ಗೊತ್ತಾಗೋದು ಎಂದು ಹೇಳಿದ್ದಾರೆ.

ನಮಗೆ ಯಾವತ್ತು ಸುಳ್ಳು ಹೇಳಿ ಅಭ್ಯಾಸ ಇಲ್ಲಾ, ನಿಜ ಹೇಳೋದಾದ್ರೇ ಸರ್ಕಾರವೇ ಇಲ್ಲಾ. ಲಕ್ಷ್ಮಣ ಸವದಿ ನನ್ನನ್ನ ಬಿಜೆಪಿಗೆ ಕರಿಲಿಲ್ಲಾ, ನಾನು ಅವ್ರನ್ನ ಕಾಂಗ್ರೆಸ್‌ಗೆ ಕರೆದಿಲ್ಲಾ. ರೇವಣ್ಣನ ಕಾಟಕ್ಕೆ ಯಾರೂನೂ ವಾಪಸ್ ಬರೋದಿಲ್ಲಾ. ರೇವಣ್ಣ ಮಾತ್ರ ಅವರ ಹೆಸರು, ಅವರ ಕಾರ್ಯಕ್ರಮ ಎಲ್ಲಾ ರಾವಣನೇ. ಹೆಸರು ರಾವಣ ಅಂತಾ ಇಡ್ಬೇಕಿತ್ತು,ಅದ್ಯಾಕೋ ಅವ್ರಪ್ಪ ರೇವಣ್ಣ ಅಂತಾ ಇಟ್ಬಿಟ್ಟಿದ್ದಾರೆ. ಸರ್ಕಾರ ಹೋಗೋಕೆ ರೇವಣ್ಣನೇ ಕಾರಣ ಎಂದು ರಾಜಣ್ಣ ಆರೋಪಿಸಿದ್ದಾರೆ.

Comments are closed.