ಕರಾವಳಿ

ಕು| ಮೈಥಿಲಿ ಶ್ರೀರಾಮ್ ಅವರಿಗೆ ‘ಕಲ್ಕೂರ ವಿದ್ಯಾರ್ಥಿಸಿರಿ’ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು : ಪ್ರತಿಷ್ಠಿತ ಮೂಕ್ಸ್ ಕೋರ್ಸಿನ ಪರೀಕ್ಷೆಯಲ್ಲಿ ‌ಅತ್ಯುನ್ನತ ಶ್ರೇಣಿಯಲ್ಲಿ ತೇಗರ್ಡೆಗೊಂಡಿರುವ ಕು| ಮೈಥಿಲಿ ಶ್ರೀರಾಮ್ ಅವರಿಗೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಕಲ್ಕೂರ ವಿದ್ಯಾರ್ಥಿ ಸಿರಿ ಪ್ರಶಸ್ತಿಯನ್ನು ನೀಡಿ‌ ಅಭಿನಂದಿಸಲಾಯಿತು.

ನಗರದ ಕದ್ರಿಯ ಮಂಜುಪ್ರಾಸಾದ’ದಲ್ಲಿ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಶಾಲು ಹೊದೆಸಿ ಸ್ಮರಣಿಕೆ ನೀಡಿ ಮೈಥಿಲಿಯನ್ನು ಗೌರವಿಸಿದರು.

ಈ ಸಂದರ್ಭ ಪ್ರತಿಷ್ಠಾನದ‌ ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರ ಶ್ರೀಮತಿ ವಿನೋದಾ ಪಿ. ಕಲ್ಕೂರ, ಎಂ. ಬಿ. ಪುರಾಣಿಕ್, ಸುಧಾಕರರಾವ್ ಪೇಜಾವರ, ಜನಾರ್ದನ ಹಂದೆ, ಶರವು ರಾಘವೇಂದ್ರ ಶಾಸ್ತ್ರೀ ಮೊದಲಾದವರು ಉಪಸ್ಥಿತರಿದ್ದರು.

Comments are closed.