ಕರಾವಳಿ

ಶಿಕ್ಷಣದಿಂದ ಸ್ವಾವಲಂಬಿಯಾಗುವ ಹರಿಶ್ಚಂದ್ರ‌ಆಚಾರ್ಯರ ಕನಸು ನನಸು ಮಾಡಿದ ಟ್ರಸ್ಟ್ : ಶಾಸಕ ಕಾಮಾತ್ ಶ್ಲಾಘನೆ

Pinterest LinkedIn Tumblr

ಮಂಗಳೂರು : ಹಿರಿಯ ಸಮಾಜ ಸೇವಕರಾದ ದಿ. ಬಿ. ಹರಿಶ್ಚಂದ್ರ‌ಆಚಾರ್ಯರ 106ನೇ ಜನ್ಮ ದಿನೋತ್ಸವವನ್ನುಶ್ರೀ ಬಿ. ಹರಿಶ್ಚಂದ್ರ‌ ಆಚಾರ್ಯ ಮೆಮೋರಿಯಲ್‌ಟ್ರಸ್ಟ್ (ರಿ.) ಇದರ‌ಆಶ್ರಯದಲ್ಲಿ ಇತ್ತೀಚಿಗೆ ಉರ್ವಾದ ‘ಆಶ್ರಯ ವಿದ್ಯಾರ್ಥಿಧಾಮ ‘ದಲ್ಲಿ‌ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಿ. ಹರಿಶ್ಚಂದ್ರ‌ಆಚಾರ್ಯರಜನ್ಮ ಶತಮಾನೋತ್ಸವ‌ಆಚರಣೆಯ ಸ್ಮಾರಕವಾಗಿಟ್ರಸ್ಟ್ ನಿರ್ಮಿಸಿದ ‘ಆಶ್ರಯ ವಿದ್ಯಾರ್ಥಿಧಾಮ’ ದ ಮೇಲಂತಸ್ತಿನ ಕಟ್ಟಡದ ಲೋಕಾರ್ಪಣೆ ಮಾಡಲಾಯಿತು.

ಸಮಾರಂಭದಮುಖ್ಯ‌ಅತಿಥಿಯಾದ ಶಾಸಕ ಡಿ. ವೇದವ್ಯಾಸಕಾಮತ್ ಮಾತನಾಡಿ, ಬಿ. ಹರಿಶ್ಚಂದ್ರ‌ಆಚಾರ್ಯರು, ಶಿಕ್ಷಕರಾಗಿ, ಸಮಾಜಸೇವಕರಾಗಿ ಶಿಕ್ಷಣದಿಂದ ಸ್ವಾವಲಂಬಿಯಾಗುವ ಯಾವ ಸಮಾಜದ ಕನಸು ಕಂಡಿದ್ದರೋ ಆ ಕನಸನ್ನು ಹರಿಶ್ಚಂದ್ರ‌ ಆಚಾರ್ಯ ಮೆಮೋರಿಯಲ್‌ಟ್ರಸ್ಟ್’ವಿದ್ಯಾರ್ಥಿಧಾಮ’ ನಿರ್ಮಾಣದ ಮೂಲಕ ನನಸಾಗಿಸುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ‌ ಎಂದರು.

ಟ್ರಸ್ಟಿನ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಪೂರ್ಣ ಸಹಕಾರವನ್ನೀಯುವ ಭರವಸೆಯನ್ನಿತ್ತರು.ವಿದ್ಯಾರ್ಥಿಧಾಮಕಟ್ಡಡಕ್ಕೆ2015- 16ರ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ‌ ಅನುದಾನ ನೀಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ರನ್ನು ಈ ಸಂದರ್ಭದಲ್ಲಿ ಟ್ರಸ್ಟಿನ ವತಿಯಿಂದ‌ಅಭಿನಂದಿಸಲಾಯಿತು.

ಹಿರಿಯ ಸಾಹಿತ್ಯಚಿಂತಕ, ಪ್ರಸಾರಕ ಇಂ. ಭೀಮಸೇನ ಬಡಿಗೇರ್‌ರವರಿಗೆ ವೈಶ್ವಕರ್ಮಣ ಸಾಹಿತ್ಯ ಪ್ರಸಾರ ಸೇವೆಗಾಗಿ ೨೦೧೯ ರರ ಸಾಲಿನ ಬಿ. ಹರಿಶ್ಚಂದ್ರಾಚಾರ್ಯ ಸ್ಮಾರಕ ಪುರಸ್ಕಾರವನ್ನಿತ್ತು ಸನ್ಮಾನಿಸಲಾಯಿತು.

ಶ್ರೀ ಕಾಳಿಕಾಂಬಾ ವಿನಾಯಕದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೇಶವ ಆಚಾರ್ಯ ದೀಪ ಪ್ರಜ್ವಲನ ಗೈದರು.ದುಬೈಯ ಶಿವಾನಂದ ಬೈಕಾಡಿಕಟ್ಟಡವನ್ನು ಲೋಕಾರ್ಪಣೆಗೈದರು.ಮುಖ್ಯ ಅತಿಥಿಗಳಾಗಿ ಶ್ರೀಮದಾನೆಗುಂದಿ ಮಠ ವಿಕಾಸ ಸಮಿತಿ‌ಅಧ್ಯಕ್ಷ ಹರಿಶ್ಚಂದ್ರ‌ಎನ್. ಆಚಾರ್ಯ, ಉದ್ಯಮಿ ಸುನೀಲ್ ಬಿ.ಉಪಸ್ಥಿತರಿದ್ದರು. ಟ್ರಸ್ಟಿನ ಉಪಾಧ್ಯಕ್ಷ ಪಿ. ಶಿವರಾಮ ಆಚಾರ್ಯ‌ಅಧ್ಯಕ್ಷತೆ ವಹಿಸಿದ್ದರು.

ಕೆ.ಮಹಾಬಲೇಶ್ವರ‌ಆಚಾರ್ಯ ಸಂಸ್ಮರಣ ಭಾಷಣ ಮಾಡಿದರು.ಈ ಸಂದರ್ಭದಲ್ಲಿ ಪ್ರಮುಖ ದಾನಿಗಳನ್ನು ಟ್ರಸ್ಟಿನ ವತಿಯಿಂದ ಸನ್ಮಾನಿಸಲಾಯಿತು. ಬಿ. ಹರಿಶ್ಚಂದ್ರ‌ಆಚಾರ್ಯ ಸ್ಮ್ಮಾರಕ ಶೈಕ್ಷಣಿಕದತ್ತಿ ನಿಧಿಗೆ ಚಾಲನೆ ನೀಡಲಾಯಿತು.

ಟ್ರಸ್ಟಿನ ಕಾರ್ಯದರ್ಶಿ ಡಾ.ಎಸ್. ಪಿ.ಗುರುದಾಸ್ ಪ್ರಸ್ತಾವನೆಗೈದರು.ಟ್ರಸ್ಟಿನ ಕಾರ್ಯಕಾರಿ ಸದಸ್ಯ ಬೈಕಾಡಿ ಜನಾರ್ದನ‌ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.ಟ್ರಸ್ಟಿನ ಸದಸ್ಯ‌ಎಸ್. ವಿ.ಆಚಾರ್‌ಅಭಿನಂದನಾ ಭಾಷಣಗೈದರು.ವನಿತಾ‌ಉಪೇಂದ್ರ‌ಆಚಾರ್ಯಧನ್ಯವಾದ ಸಮರ್ಪಿಸಿದರು.

Comments are closed.