ರಾಷ್ಟ್ರೀಯ

ಬಿಸಿಲಿನ ಬೇಗೆಗೆ ತತ್ತರಿಸಿದ ರಾಷ್ಟ್ರ ರಾಜಧಾನಿ; ಬೇಸಿಗೆ ರಜೆ ವಿಸ್ತರಿಸಿದ ಆಪ್​​ ಸರ್ಕಾರ

Pinterest LinkedIn Tumblr


ನವದೆಹಲಿ(ಜೂನ್​​.30): ಬಿರು ಬಿಸಿಲಿಗೆ ತತ್ತರಿಸಿ ಹೋಗಿರುವ ಭಾರತ ರಾಜಧಾನಿಯಲ್ಲಿ 8ನೇ ತರಗತಿವರೆಗಿನ ಮಕ್ಕಳಿಗೆ ಬೇಸಿಗೆ ರಜೆ ವಿಸ್ತರಿಸಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ಬೇಸಿಗೆ ರಜೆಯನ್ನು ಜುಲೈ 8ರವರೆಗೆ ವಿಸ್ತರಿಸಿ ಸಿಎಂ ಅರವಿಂದ್​​ ಕೇಜ್ರಿವಾಲ್​​ ನೇತೃತ್ವದ ಆಪ್​​ ಸರ್ಕಾರ ಆದೇಶ ಹೊರಡಿಸಿದೆ.

ಎಂಟನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ. 9ರಿಂದ 12ನೇ ತರಗತಿಗೆ ಈ ಆದೇಶ ಅನ್ವಯಿಸುವುದಿಲ್ಲ. ನಿಗದಿತ ವೇಳಾಪಟ್ಟಿಯಂತೆಯೇ ಈ ತರಗತಿಗಳು ಆರಂಭವಾಗಲಿವೆ ಎಂದು ಎಂದು ಡಿಸಿಎಂ ಮತ್ತು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಭಾರತದ ಅನೇಕ ಭಾಗಗಳಲ್ಲಿ ಬೇಸಿಗೆಯ ಬಿಸಿ ಉಚ್ಛ್ರಾಯ ಮಟ್ಟಕ್ಕೆ ಹೋಗಿದೆ. ಹಲವು ಕಡೆ ಉಷ್ಣಾಂಶ 50 ಡಿಗ್ರೀ ಗಡಿ ದಾಟಿದೆ. ಭಾರೀ ಬಿಸಿಗಾಳಿಗೆ ಜನರು ತತ್ತರಿಸಿಹೋಗಿದ್ದಾರೆ. ದೆಹಲಿಯಲ್ಲಿ ಮಾತ್ರ ಇನ್ನೂ ಕೆಲ ದಿನಗಳ ಕಾಲ ಬಿಸಿ ಗಾಳಿ ಮುಂದುವರಿಯಲಿದೆ. ಸದ್ಯ ಸಾಮಾನ್ಯಮಟ್ಟಕ್ಕಿಂತ 5 ಡಿಗ್ರಿಯಷ್ಟು ಅಧಿಕ ಉಷ್ಣಾಂಶ ದಾಖಲಾಗಿದೆ ಎನ್ನುತ್ತಿದೆ ಹವಾಮಾನ ಇಲಾಖೆ.

ಮಧ್ಯಪ್ರದೇಶ, ತೆಲಂಗಾಣ, ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಉಷ್ಣಾಂಶ ಅಪಾಯಕಾರಿ ಮಟ್ಟಕ್ಕೆ ಹೋಗುತ್ತಿದೆ. ಮೂರು ವಾರಗಳಿಂದ ಇಲ್ಲೆಲ್ಲಾ 17 ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ.

Comments are closed.