ರಾಷ್ಟ್ರೀಯ

ಸಂಪುಟದಲ್ಲಿ 23 ಕೋಟ್ಯಧಿಪತಿಗಳು, ಮುಖ್ಯಮಂತ್ರಿ ಹತ್ತಿರ 510 ಕೋಟಿ ಆಸ್ತಿ

Pinterest LinkedIn Tumblr

01
ಹೈದರಾಬಾದ್: ಆಂಧ್ರ ಪ್ರದೇಶದ 17 ಜನ ನೂತನ ಸಚಿವರು ತಮ್ಮ ಮೇಲೆ ಇರುವ ಕ್ರಿಮಿನಲ್ ಪ್ರಕರಣಗಳ ಪಟ್ಟಿಯನ್ನು ಘೋಷಣೆ ಮಾಡಿಕೊಂಡಿದ್ದಾರೆ. 26 ಸಚಿವರ ಪೈಕಿ 23 ಜನ ಕೋಟ್ಯಧಿಪತಿಗಳು. ಇದರಲ್ಲಿ 9 ಸಚಿವರ ಮೇಲೆ ಗಂಭೀರ ಕ್ರಿಮಿನಲ್ ಆರೋಪಗಳಿವೆ. ಸರಾಸರಿ ಲೆಕ್ಕದಲ್ಲಿ ಪ್ರತಿಯೊಬ್ಬ ಸಚಿವರು 32.25 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ಆಂಧ್ರದ ಸಿಎಂ ವೈ ಎಸ್ ಜಗನ್ ಮೋಗನ್ ರೆಡ್ಡಿ 510.38 ಕೋಟಿ ರೂ. ಆಸ್ತಿ ಹೊಂದಿದ್ದು ಶ್ರೀಮಂತರ ಪಟ್ಟಿಯಲ್ಲಿ ಮೊದಲಿಗರು. ಪೆಡ್ಡಿ ರೆಡ್ಡಿ ರಾಮಚಂದ್ರ ರೆಡ್ಡಿ 130 ಕೋಟಿ ರೂ. ಮೇಕ್ ಪರಿ ಗೌತಮ್ ರೆಡ್ಡಿ 61 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ಜಗನ್ ಬಳಿ 443 ಕೋಟಿ ಚರಾಸ್ತಿ ಇದ್ದರೆ , 66 ಕೋಟಿ ರೂ. ಸ್ಥಿರಾಸ್ತಿ ಇದೆ.

12 ಜನ ಅಂದರೆ ಶೆ. 46 ರಷ್ಟು ಸಚಿವರ ವಯಸ್ಸು 31 ರಿಂದ 50 ರ ಮಧ್ಯದಲ್ಲಿದೆ. ಇನ್ನು ಶೇ. 54 ರಷ್ಟು ಸಚಿವರ ವಯಸ್ಸು 51 ರಿಂದ 70 ವರ್ಷದ ನಡುವೆ ಇದೆ. ಮೂವರು ಸಚಿವೆಯರು ಇದ್ದಾರೆ.

Comments are closed.