
ಹಾಸ್ಯ ಪ್ರತಿಯೊಬ್ಬರ ಅಯುಷ್ಯ ಹೆಚ್ಚಿಸುತ್ತೆ ಅಂತಾರೆ. ಅದೇ ಹಾಸ್ಯದ ರಸದೌತಣ ಉಣಬಡಿಸೋ ಕನ್ನಡ ಬೆಳ್ಳಿತೆರೆಯ ಚಾರ್ಲಿ ಚಾಪ್ಲಿನ್ ಚಿಕ್ಕಣ್ಣ, ಇತ್ತೀಚೆಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನೇಮು- ಫೇಮು, ಹಣ, ಆಸ್ತಿ, ಅಂತಸ್ತು ಎಲ್ಲವೂ ಸಂಪಾದಿಸಿರೋ ಚಿಕ್ಕಣ್ಣ ಕಣ್ಣೀರಾಕಿದ್ದಾದ್ರು ಯಾಕೆ..? ಅವ್ರ ಆರಂಭದ ದಿನಗಳ ಹಿಂದಿನ ರೋಚಕತೆ ಆದ್ರು ಏನು ಅಂತೀರಾ..? ಈ ಸ್ಪೆಷಲ್ ಸ್ಟೋರಿ ಇಲ್ಲಿದೆ ಓದಿ.
ಕಿರಾತಕ.. ರಾಕಿಂಗ್ ಸ್ಟಾರ್ ಯಶ್ರ ಆ್ಯಕ್ಟಿಂಗ್ ಸ್ಟ್ರೆಂಥ್ ಎಂಥದ್ದು ಅನ್ನೋದನ್ನ ತೋರಿಸಿಕೊಟ್ಟ ಸಿನಿಮಾ. ಅಷ್ಟೇ ಅಲ್ಲ, ಯಶ್ ಸಿನಿಕರಿಯರ್ಗೆ ಮೈಲಿಗಲ್ಲಾದಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ. ಇವೆಲ್ಲಕ್ಕಿಂತ ಹೆಚ್ಚಾಗಿ ಚಿಕ್ಕಣ್ಣ ಅನ್ನೋ ಹಾಸ್ಯರಾಜನನ್ನ ಬೆಳಕಿಗೆ ತಂದಂತಹ ಚಿತ್ರ ಅನ್ನೋ ಹೆಗ್ಗಳಿಕೆ ಈ ಚಿತ್ರ ಹಾಗೂ ಯಶ್ರವರಿಗೆ ಸಲ್ಲುತ್ತೆ.
ಕಿರಾತಕ ಚಿತ್ರದ ನಂತ್ರ ಚಿಕ್ಕಣ್ಣನಿಗೆ ಅದೃಷ್ಠ ದೇವತೆ ಖುಲಾಯಿಸುತ್ತೆ. ಆಫರ್ಗಳ ಸುರಿಮಳೆಯೇ ಆಗುತ್ತೆ. ಸಾಲು ಸಾಲು ಸ್ಟಾರಗಳ ಸಿನಿಮಾಗಳಲ್ಲಿ ಡಿಮ್ಯಾಂಡೋ ಡಿಮ್ಯಾಂಡ್. ಅಷ್ಟೇ ಯಾಕೆ, ಒಳ್ಳೆ ನೇಮು, ಫೇಮು, ಆಸ್ತಿ, ಅಂತಸ್ತು ಎಲ್ಲವೂ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಸಿಗುತ್ತೆ. ಆದರೂ ಚಿಕ್ಕಣ್ಣ ಕಣ್ಣೀರಾಕ್ತಾರೆ.
ಮಾಡಿದ ಸಿನಿಮಾದಲ್ಲೆಲ್ಲಾ ನೋಡುಗರ ಮುಖದಲ್ಲಿ ನಗೆ ಉಕ್ಕಿಸೋ ಚಿಕ್ಕಣ್ಣ ಈ ರೀತಿ ಬಿಕ್ಕಿ ಬಿಕ್ಕಿ ಅಳೋಕ್ಕೆ ಕಾರಣ ಅಪ್ಪ. ಹೌದು.. ತಂದೆ ಮೇಲೆ ಅಪಾರ ಪ್ರೀತಿ, ಗೌರವವಿದ್ದ ಚಿಕ್ಕಣ್ಣ ಕಡು ಬಡತನದಲ್ಲೇ ಹುಟ್ಟಿ ಬೆಳೆದವರು. ಬೆಂಗಳೂರೇ ಕಾಣದ ಅಪ್ಪನನ್ನ ಒಮ್ಮೆ ಸಿಟಿಗೆ ಕರೆತಂದು, ಇಡೀ ಸಿಟಿ ಸುತ್ತೋ ಕನಸು ಕಂಡಿದ್ರು ಚಿಕ್ಕಣ್ಣ. ಆದ್ರೆ ಒಂದು ದಿನ ಶೂಟಿಂಗ್ಗೆ ತೆರಳೋ ಸಮಯದಲ್ಲಿ ಅಪ್ಪ ಇನ್ನಿಲ್ಲ ಅನ್ನೋ ಫೋನ್ ಕರೆ ಕೇಳಿ ಬರಸಿಡಿಲು ಬಡಿದಂತಾಗ್ತಾರೆ ಚಿಕ್ಕಣ್ಣ.
ಅಂದಹಾಗೆ ಈ ಮನಕಲಕೋ ಭಾವುಕ ಕತೆಯನ್ನ ಚಿಕ್ಕಣ್ಣ ಇತ್ತೀಚೆಗೆ ಝೀ ಕನ್ನಡದಲ್ಲಿ ನಡೆದಂತಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೊರಹಾಕಿರೋದು ವಿಶೇಷ. ಸದಾ ನಗು ನಗುತಾ, ಜೊತೆಗಿದ್ದವರನ್ನೂ ನಗಿಸುತ್ತಾ ಜೀವಿಸೋ ಚಿಕ್ಕಣ್ಣ ಕಣ್ಣೀರು ಕಂಡು ಎಂಥವರೂ ಹುಬ್ಬೇರಿಸುವಂತಾಗಿದೆ.
ಮೈಸೂರಿನ ದೃಶ್ಯ ಕಲಾವಿದೆಯಲ್ಲಿ ಕಾಮಿಡಿ ಶೋಸ್ ಮಾಡ್ತಿದ್ದ ಚಿಕ್ಕಣ್ಣ, ಅದಾದ ಬಳಿಕ ಖಾಸಗಿ ವಾಹಿನಿಯ ಶೋಗಳಿಗೆ ಎಂಟ್ರಿ ಕೊಡ್ತಾರೆ. ಒಮ್ಮೆ ಚಿತ್ರರಂಗದ ಡೈಮಂಡ್ ಜ್ಯೂಬಿಲಿ ಕಾರ್ಯಕ್ರಮದಲ್ಲಿನ ಚಿಕ್ಕಣ್ಣನ ಪರ್ಫಾರ್ಮೆನ್ಸ್ ಕಂಡ ನಟ ರಾಕಿಂಗ್ ಸ್ಟಾರ್ ಯಶ್, ಕಿರಾತಕ ಸಿನಿಮಾಗೆ ಆಫರ್ ಮಾಡ್ತಾರೆ. ಆದ್ರೆ ಚಿಕ್ಕಣ್ಣ ಕಿರಾತಕ ಚಿತ್ರಕ್ಕೆ ಆಯ್ಕೆ ಆಗೋಕ್ಕೂ ಮುನ್ನ ಮಾಡದ ಕೆಲಸವೇ ಇಲ್ಲ. ಎದುರಿಸದ ಅವಮಾನವೇ ಇಲ್ಲ.
ಚಿಕ್ಕಣ್ಣ ಹೇಳ್ತಿರೋದು ಅಕ್ಷರಶಃ ನಿಜ. 40, 50 ರೂಪಾಯಿಗೆ ಗಾರೆ ಕೆಲಸ ಮಾಡ್ತಿದ್ದ ಚಿಕ್ಕಣ್ಣನಿಗೆ, ಜೀವನ ಸಾಗಿಸೋದು ತುಂಬಾನೇ ಕಷ್ಟವಾಗಿತ್ತು. ಸಿಮೆಂಟು, ಸುಣ್ಣ ಮುಟ್ಟಿ ಮುಟ್ಟಿ ಕೈಯೆಲ್ಲಾ ತೂತಾಗಿಬಿಡ್ತಿತ್ತಂತೆ. ನಂತ್ರ ಊಟ ಮಾಡೋಕ್ಕೆ ಅನ್ನದಲ್ಲಿ ಕೈಯಿಟ್ಟರೆ ಉರಿಯೋ ಬೆಂಕಿಗೆ ಕೈಯಿಟ್ಟಂಗಾಗ್ತಿತ್ತು ಅನ್ನೋ ಮಾತು ನಿಜಕ್ಕೂ ಮನಮಿಡಿಯುತ್ತೆ.
ಇನ್ನು ಗಾರೆ ಕೆಲಸಕ್ಕಿಂತ ಹೂ ಮಾರೋದೇ ಸುಲಭದ ಕೆಲಸ ಅಂದುಕೊಂಡ ಚಿಕ್ಕು, ಏಕ್ಧಮ್ ಹೂ ಮಾರೋಕ್ಕೆ ಹೋಗ್ತಾರೆ. ಮೊಣ ಹಾಗೂ ಮಾರಿಗೆ ವ್ಯತ್ಯಾಸ ಗೊತ್ತಿಲ್ಲದ ಚಿಕ್ಕಣ್ಣ, ಕೂಲಿ ಕೆಲಸಕ್ಕೆ ಹೋಗೋ ವೇಳೆಗೆ 140 ರೂಪಾಯಿ ದುಡೀತಾ ಇದ್ರಂತೆ.
ಒಟ್ಟಾರೆ ಚಿಕ್ಕಣ್ಣ ಇವತ್ತು ಒಬ್ಬ ಸ್ಟಾರ್ ಅಂತಷ್ಟೇ ಎಲ್ರಿಗೂ ಗೊತ್ತಿದೆ. ಅವ್ರ ಬದುಕಲ್ಲಿ ಇಷ್ಟೆಲ್ಲಾ ಕಷ್ಟ, ನೋವು ಅಡಗಿತ್ತು ಅನ್ನೋದು ಈ ಸಾಧಕರ ಸೀಟ್ ತಿಳಿಸಿಕೊಟ್ಟಿದೆ. ಬದುಕೋ ಛಲ, ಮುಟ್ಟೋ ಗುರಿ ಗೊತ್ತಿದ್ರೆ ಯಾರು ಏನು ಬೇಕಾದ್ರೂ ಆಗಬಹುದು ಅನ್ನೋದಕ್ಕೆ ಚಿಕ್ಕಣ್ಣನಿಗಿಂತ ಉತ್ತಮ ನಿದರ್ಶನ ಮತ್ತೊಂದಿಲ್ಲ. ಸ್ಟಾರ್ ಆಗ್ಬೇಕು ಅಂತ ಕನಸು ಕಾಣೋರು ಇವ್ರನ್ನ ಇನ್ಸ್ಪಿರೀಷನ್ ಆಗಿ ತೆಗೆದುಕೊಂಡ್ರೆ ಸಕ್ಸಸ್ನ ಸಿಹಿ ಕಾಣೋದು ಕಷ್ಟವಾಗದು.
Comments are closed.