
ಪ್ರಿಯಾಂಕ ಉಪೇಂದ್ರ ಅಭಿನಯದ ದೇವಕಿ ಚಿತ್ರ ರಿಲೀಸ್ ಹೊಸ್ತಿಲಿಗೆ ಬಂದು ನಿಂತಿದೆ..ಟೀಸರ್ ನಿಂದ ಸೌಂಡ್ ಮಾಡಿದ್ದ ದೇವಕಿಗೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು. ಇದೀಗ ತೆರೆಮೇಲೆ ದೇವಕಿಯ ಆಟ ಶುರುವಾಗಲು ಡೇಟ್ ಫಿಕ್ಸ್ ಆಗಿದೆ.
‘ದೇವಕಿ’ ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಫೀಮೇಲ್ ಓರಿಯಂಟೆಡ್ ಸಿನಿಮಾ.. ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಟೈಟಲ್ ರೋಲ್ ಪ್ಲೇ ಮಾಡ್ತಿದ್ದು, ಪುತ್ರಿ ಐಶ್ವರ್ಯ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಬಾಲ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಆಫ್ಟರ್ ಮಮ್ಮಿ ಎರಡನೇ ಬಾರಿಗೆ ಲೋಹಿತ್ ಹಾಗೂ ಪ್ರಿಯಾಂಕ ಒಂದಾಗಿದ್ದಾರೆ.. ಚಿತ್ರದಲ್ಲಿ ಮಕ್ಕಳ ಕಳ್ಳಸಾಗಣೆ ಕುರಿತ ಸ್ಟ್ರಾಂಗ್ ಸ್ಟೋರಿಯನ್ನ ಬಿಚ್ಚಿಡಲಿದ್ದಾರೆ ಎಂಗ್ ಅಂಡ್ ಟ್ಯಾಲೆಂಟೆಡ್ ಡೈರೆಕ್ಟರ್ ಲೋಹಿತ್..
ದೇವಕಿ ಟೀಸರ್ ಯೂ ಟ್ಯೂಬ್ ನಲ್ಲಿ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ… ವೇಣು ಕ್ಯಾಮರಾ, ನೊಬಿನ್ ಪೌಲ್ ಸಂಗೀತ ಹಾಗೂ ಸಿ.ರವಿಚಂದ್ರನ್ ಎಡಿಟಿಂಗ್ ಚಿತ್ರದ ಮೇನ್ ಹೈಲೈಟ್ಸ್ ಆಗಿದೆ. ಆರ್ ಸಿ ಎಸ್ ಬ್ಯಾನರ್ ನಲ್ಲಿ ನಿರ್ಮಾಣವಾಗ್ತಿರೋ ದೇವಕಿ ಚಿತ್ರ ಟೀಸರ್ ರಿಲೀಶ್ ಆಗಿ ತಿಂಗಳುಗಳೇ ಕಳೆದಿತ್ತು ಆದ್ರೆ ಸಿನಿಮಾ ಯಾವಾಗ ರಿಲೀಶ್ ಆಗುತ್ತೆ ಎಂದು ಎಲ್ರೂ ಕೇಳ್ತಿದ್ರು..ಇದೀಗ ಸಿನಿಮಾ ಜುಲೈ 5ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡೋದು ಕನ್ಫರ್ಮ್ ಆಗಿದೆ.
ದೇವಕಿ ಚಿತ್ರ ತನ್ನ ಕಥೆಯಿಂದ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ,,ಇನ್ನೊಂದು ಕಡೆ ಮಹಿಳಾ ಪ್ರಧಾನ ಚಿತ್ರ ಕೂಡ ದೇವಕಿಯಾಗಿರೋದ್ರಿಂದ ಪ್ರೇಕ್ಷಕರಲ್ಲಿ ನೀರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಎಲ್ಲದಕ್ಕೂ ಜುಲೈ 5ಕ್ಕೆ ಉತ್ತರ ಸಿಗಲಿದೆ.
Comments are closed.