
ಬೆಂಗಳೂರು: ನಾವ್ ಹೇಳಿದ್ರೆ ಕುಮಾರಸ್ವಾಮಿನೂ ಕೇಳಬೇಕು. ಅವರಪ್ಪನೂ ಕೇಳಬೇಕು. ಎಲ್ಲಾ ಶಾಸಕರು ರಾಜೀನಾಮೆ ಕೊಟ್ರೆ ಕುಮಾರಸ್ವಾಮಿ ಅಷ್ಟೇ ಅಲ್ಲ ಅವರಪ್ಪನು ಮಾತು ಕೇಳ್ತಾರೆ ಎಂದು ವಾಲ್ಮೀಕಿ ಸಮುದಾಯದ ಪ್ರಸನ್ನಾನನಂದ ಪುರಿ ಸ್ವಾಮೀಜಿ ಅವರು ಹೇಳಿದರು.
ನಗರದಲ್ಲಿ ಮಂಗಳವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಾಲ್ಮೀಕಿ ಸಮುದಾಯದ ಪ್ರತಿಭಟನೆ ವೇಳೆ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಶಾಸಕರಿಗೆ, ಕಾಂಗ್ರೆಸ್ ಹೈಕಮಾಂಡ್ ಫೋನ್ ಮಾಡೋದಿಲ್ಲ. ಆದರೆ, ಕುಮಾರಸ್ವಾಮಿ ಫೋನ್ ಮಾಡ್ತಾರೆ. ಫೋನ್ ಮಾಡಿ ಅಣ್ಣಾ..ಅಣ್ಣಾ ನಿಮಗೇನು ಬೇಕು ಕೇಳಿ ಅಂತ ಕಾಲು ಬೇಕಾದ್ರು ಹಿಡೀತಾರೆ ಎಂದ ಅವರು ತಿಳಿಸಿದರು.
ಅಷ್ಟೇ ಅಲ್ಲದೇ ಅಧಿಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಎಷ್ಟು ನಾಟಕ ಮಾಡುತ್ತಾರೆ ಗೊತ್ತಿದೆ ಎಂದು ಪ್ರಸನ್ನಾನನಂದ ಪುರಿ ಸ್ವಾಮೀಜಿ ಅವರು ನುಡಿದರು.
ಕೈ ಶಾಸಕರಿಗೆ ರಾಜೀನಾಮೆ ಕೊಟ್ಟು ಸರ್ಕಾರ ಉರುಳಿಸಿ, ಕೊಡ್ರೀ ನನ್ನ ಕೈಗೆ ರಾಜೀನಾಮೆ ಎಂದು ತಮ್ಮ 8 ಜನ ಕಾಂಗ್ರೆಸ್ ಶಾಸಕರಿಗೆ ಸ್ವಾಮಿಜೀಗಳು ಕರೆ ನೀಡಿದ ಅವರು, ರಾಜ್ಯದಲ್ಲಿ ಒಟ್ಟು ಹದಿನೇಳು ಶಾಸಕರು ಇದ್ದಾರೆ. ಸರ್ಕಾರ ಉಳಿಸಲು ಕಾಲು ಹಿಡಿತೀರಿ ಅನ್ನೋದು ನಂಗೆ ಗೊತ್ತಿಲ್ವಾ, ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯಬೇಕಾ ಅನ್ನೋದು ಇವತ್ತು ಡಿಸೈಡ್ ಆಗಲಿ ಎಂದು ಅವರು ಸಿಎಂ ವಿರುದ್ಧ ಸಿಡಿಮಿಡಿಗೊಂಡು ಮಾತನಾಡಿದರು.
Comments are closed.