
ಕಷ್ಟದಲ್ಲಿರೋರಿಗೆ ಸಿಎಂ ಸಹಾಯಾಸ್ತ ಚಾಚಿರುವ ಉದಾಹರಣೆ ನಮ್ಮ ಮುಂದೆ ತುಂಬಾ ಇದೆ. ಹಾಗೆಯೇ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಡ ಕುಟುಂಬದ ಬಾಲಕಿಗೆ ಕೊಟ್ಟ ಭರವಸೆಯಂತೆ ಚಿಕಿತ್ಸೆಗೆ ಹಣ ಸಹಾಯ ಮಾಡಿ ಪುಟ್ಟ ಕಂದಮ್ಮನ ಬದುಕಿಗೆ ಆಶಾ ಕಿರಣವಾಗಿದ್ದಾರೆ.
ಕುಮಾರಸ್ವಾಮಿ ಕಷ್ಟದಲ್ಲಿರುವವರಿಗೆ ಎಂಥ ಸಮಯದಲ್ಲಾದರು ಸಹಾಯಕ್ಕೆ ಬರ್ತಾರೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚಿಗೆ ಮಂಡ್ಯದ ಶ್ರೀರಂಗಪಟ್ಟಣದ ಆನಂದೂರು ಗ್ರಾಮದ ರಿಯಾಂಜಲಿ ಎಂಬ ಬಾಲಕಿಗೆ ಬಲಗೈ ಶಸ್ತ್ರ ಚಿಕಿತ್ಸೆಗೆ ನೆರವಾಗಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೆ.ಆರ್.ಎಸ್.ನಲ್ಲಿ ವಾಸ್ತವ್ಯ ಹೂಡಿದ್ದ ಸಿ ಎಂ ಕುಮಾರಸ್ವಾಮಿಗೆ, ಕುಮಾರ್ ಎಂಬುವವರು ತಮ್ಮ ಪುತ್ರಿ ರಿಯಾಂಜಲಿ ಬಲಗೈ ಶಸ್ತ್ರ ಚಿಕಿತ್ಸೆಗಾಗಿ ನೆರವಿನ ಹಸ್ತ ಚಾಚಿದ್ದರು. ಅಂದು ಪ್ರಚಾರ ಹಾಗೂ ನೀತಿ ಸಂಹಿತೆ ಅಡ್ಡಿಯಿದ್ದರಿಂದ ಈಗ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ.
ಆನಂದೂರಿನ ಕುಮಾರ್ ಎಂಬೋರಿಗೆ ಮೂರು ಜನ ಹೆಣ್ಣು ಮಕ್ಕಳು ಬಡ ಕುಟುಂಬಕ್ಕೆ ಸಹಾಯ ಮಾಡೋರು ದಿಕ್ಕಿಲ್ಲದ ಸಂದರ್ಭದಲ್ಲಿ ಚುನಾವಣೆ ಸಂದರ್ಭದಲ್ಲಿ ಗ್ರಾಮಕ್ಕೆ ಬಂದಾಗ ಅವರ ಸಮಸ್ಯೆ ಕೇಳಿ ಮರುಗಿದ್ದ ಮುಖ್ಯಮಂತ್ರಿಗಳು, ಏಪ್ರಿಲ್ 10ರಂದು ಆ ಕುಟುಂಬ ವನ್ನು ತಮ್ಮ ಮನೆಗೆ ಕರೆಸಿಕೊಂಡು ಅವರ ಜೊತೆ ಮಾತನಾಡಿ, ಎರಡು ಲಕ್ಷ ರೂ. ಚಿಕಿತ್ಸೆ ವೆಚ್ಚವನ್ನು ಅವರೇ ಬರಿಸಿದ್ದಾರೆ.
ಹುಟ್ಟಿನಿಂದಲೇ ಬಲಗೈ ಸ್ವಾಧೀನ ಕಳೆದುಕೊಂಡಿದ್ದ ರಿಯಾಂಜಲಿ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾಳೆ. ಆ ಕುಟುಂಬ ಸಿಎಂ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿದೆ.
Comments are closed.