
ಹಾಸನ: ಒಂದು ವರ್ಷದಿಂದ ಸರ್ಕಾರ ಆಗ ಬೀಳುತ್ತೆ ಈಗ ಬೀಳುತ್ತೆ ಅಂತಾ ಬಿಜೆಪಿಯ ಮುಖಂಡರು ಹೇಳುತ್ತಾ ಬಂದರು ಆದರೆ ದೈವಾನುಗ್ರಹದಿಂದ ನಮ್ಮ ಸರ್ಕಾರ ಉಳಿದಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಹೇಳಿದರು.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಎಷ್ಟು ದಿನ ಇರುತ್ತೋ ಅಷ್ಟು ದಿನ ಕೆಲಸ ಮಾಡ್ತೀವಿ, ಇಡೀ ರಾಜ್ಯದಲ್ಲಿ ನನ್ನ ಮೇಲೆ ತನಿಖೆ ಮಾಡಿ ಅಂತಾ ಸರ್ಕಾರಕ್ಕೆ ಪತ್ರ ಬರೆದ ಏಕೈಕ ಪ್ರತಿನಿಧಿ ನಾನು,ಯಡಿಯೂರಪ್ಪ ಸರ್ಕಾರದಲ್ಲಿ ನನ್ನ ಮೇಲೆ ತನಿಖೆ ಮಾಡಿದರು. ಕೆಲವು ಒಳ್ಳೆಯ ಅಧಿಕಾರಿಗಳ ಮೇಲೆ ತನಿಖೆ ಮಾಡಿಸಿದರು,ಅಂತಾ ಕಳ್ಳರ ದೇಶ ಇದು ಎಂದು ಕಿಡಿಕಾರಿದರು.
2006 ರಲ್ಲಿ ನಮ್ಮ ಸರ್ಕಾರದಲ್ಲಿ 450 ಚೆಸ್ಕಾಂ ಸಬ್ ಸ್ಟೇಷನ್ ಮಾಡಿದ್ದೆ, ಈಗ ಎಲ್ಲಾ ಆನ್ ಲೈನ್ ಗೀನ್ ಲೈನ್ ಅಂತಾರೆ ಆಗ ಯಾವುದೂ ಇರಲಿಲ್ಲಾ, ಕಳೆದ ಹಿಂದಿನ ಸರ್ಕಾರ ಏನು ಮಾಡಿದೆ ಅಂತಾ ಹೇಳಲಿ ಎಂದು ಸವಾಲ್ ಹಾಕಿದರು. ಕಳೆದ ಐದು ವರ್ಷದಲ್ಲಿ ಜನರಿಗೆ ಕೇಂದ್ರದ ಆಡಳಿತದಲ್ಲಿ ಏನು ಮಾಡಿದೆ ಎಂದು ಪ್ರಶ್ನೆಮಾಡಿದರು.
ತುಮಕೂರಿಗೆ 25 ಟಿಎಂಸಿ ನೀರು ನೀಡಿದ ಮೊದಲ ಸಿಎಂ ಕುಮಾರಸ್ವಾಮಿ, ಈಗ ಹೊಸ ಎಂಪಿ ಬಂದಿದ್ದಾರೆ ಹೇಗೆ ನೀರು ಕೊಡಿಸುತ್ತಾರೆ ನೋಡೋಣ ಎಂದು ಸವಾಲ್ ಹಾಕಿದರು, ಖಾಸಗಿಯವರ ಪೈಪೋಟಿ ಮೇಲೆ ನಾವು ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಪ್ರಾರಂಭಿಸುತ್ತಿದ್ದೇವೆ, ಈ ಬಾರಿ 1000 ಇಂಗ್ಲೀಷ್ ಮಾಧ್ಯಮ ಶಾಲೆ ಪ್ರಾರಂಭಿಸ್ತೀವಿ, ಕೆಇಬಿಗೆ 200 ಕೋಟಿ ಅನುದಾನ ಕೊಡಿಸಿದ್ದೆ ಅದಕ್ಕೆ ನನಗೆ 10 ಕೋಟಿ ಲಂಚ ಕೊಡೋಕೆ ಬಂದರು, ನಾನು ಲಂಚ ತೆಗೆದುಕೊಳ್ಳಲಿಲ್ಲಾ ಬದಲಾಗಿ ಬೆಂಗಳೂರಿನಲ್ಲಿ ಕೆಪಿಟಿಸಿಎಲ್ ಬ್ಲಾಕ್ ಮಾಡಿ ಅಂತಾ ಮಾಡಿಸಿದ್ದೇನೆ ಎಂದರು.
Comments are closed.