
ಕೊಪ್ಪಳ: ರಸ್ತೆ ಮಧ್ಯೆಯೇ ಕೆಎಸ್ಆರ್ಟಿಸಿ ಬಸ್ ನಿಲ್ಲಿಸಿ ಇಬ್ಬರು ಚಾಲಕರು ಬಡಿದಾಡಿಕೊಂಡಿರುವ ಘಟನೆಯೊಂದು ಕೊಪ್ಪಳ ಜಿಲ್ಲೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಪ್ಪಳದ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿಂದು ಇಬ್ಬರು ಬಸ್ ಚಾಲಕರು ಜಗಳ ಮಾಡಿಕೊಂಡು ಕೈಕೈ ಮೀಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಬಸ್ ಬಿಡುವ ವಿಚಾರವಾಗಿ ಗಲಾಟೆ ನಡೆದಿದ್ದು ಅರ್ಧ ಗಂಟೆ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ರಂಪಾಟ ಮಾಡಿದ್ದಾರೆ.
ಗಂಗಾವತಿ-ಹುಬ್ಬಳ್ಳಿ, ಹೈದ್ರಾಬಾದ್-ಕೊಪ್ಪಳ ಬಸ್ ಚಾಲಕರ ನಡುವೆ ಗಲಾಟೆ ನಡೆದಿದೆ. ಇವರಿಬ್ಬರ ಜಗಳಕ್ಕೆ ಪ್ರಯಾಣಿಕರ ಕಂಗಾಲಾಗಿದ್ದಾರೆ. ಸದ್ಯ ಇಬ್ಬರು ಚಾಲಕರು ಕೊಪ್ಪಳದಲ್ಲಿಯೇ ಬಸ್ ನಿಲ್ಲಿಸಿ ಬಸ್ ಡಿಪೋ ಘಟಕಕ್ಕೆ ತೆರಳಿದ್ದಾರೆ.
Comments are closed.