
ಮಂಗಳೂರು : ಸರ್ಫಿಂಗ್ ಸ್ವಾಮಿ ಫೌಂಡೇಶನ್, ಮಂತ್ರ ಸರ್ಫ್ ಕ್ಲಬ್, ಅಡ್ವೆಂಚರ್ ವರ್ಕ್ಸ್, ಥಂಡರ್ ಮಂಕಿ, ಫೈಯರ್ ವೈರ್ ಸರ್ಫ್ ಬೋರ್ಡ್ ಸಂಘಟನೆಗಳ ಸಹಭಾಗಿತ್ವದಲ್ಲಿ ಪಣಂಬೂರು ಕಡಲಲ್ಲಿ ರವಿವಾರ ಮಕ್ಕಳ ಸರ್ಫಿಂಗ್ ಸ್ಪರ್ಧೆ ಜರುಗಿತು.
ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ನಡೆದ ‘ಮಂತ್ರ ಗ್ರೋಮ್ ಸರ್ಚ್’ ಸ್ಪರ್ಧೆಯಲ್ಲಿ ಮುಲ್ಕಿ, ಪಣಂಬೂರು, ತಣ್ಣೀರುಬಾವಿ, ಬೆಂಗರೆ ಪರಿಸರದಲ್ಲಿ ಕಾರ್ಯಾಚರಿಸುವ ಕ್ಲಬ್ಗಳ 50ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.




ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಸಾರ್ವಜನಿಕರು ಮಕ್ಕಳ ಸಾಹಸಮಯ ಸರ್ಫಿಂಗ್ ಸ್ಪರ್ಧೆಯನ್ನು ವೀಕ್ಷಿಸಿ ಮೆಚ್ಚುಗೆವ್ಯಕ್ತಪಡಿಸಿದರು.
Comments are closed.