ಕರ್ನಾಟಕ

ರೇವಣ್ಣ ಮುಖ್ಯಮಂತ್ರಿ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಹೇಳಿಕೆ- ಭವಾನಿ ರೇವಣ್ಣ ಪ್ತತಿಕ್ರಿಯೆ

Pinterest LinkedIn Tumblr


ಹಾಸನ: ಸಚಿವ ರೇವಣ್ಣ ಸಿಎಂ ಆಗಲು ಅರ್ಹರು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಭಗವಂತನ ಇಚ್ಛೆಗೆ ನಾವು ಬದ್ಧ. ನಮ್ಮ ಮನೆಯವರೇ ಸಿಎಂ ಇರುವುದರಿಂದ ಅವರನ್ನ ಪಕ್ಕಕ್ಕೆ ಸರಿಸಿ ರೇವಣ್ಣ ಆಗಲಿ ಎಂದು ಹೇಳುವುದಿಲ್ಲ ಎಂದು ಹೇಳಿದ ಭವಾನಿ ರೇವಣ್ಣ, ರೇವಣ್ಣ ಸಿಎಂ ಆಗಬೇಕಾ ಬೇಡವಾ ಅದು ಭಗವಂತನ ಇಚ್ಛೆ. ಅವರಿಗೆ ಅವಕಾಶ ಬಂದಾಗ ಯಾರು ತಡೆಯಲು ಆಗಲ್ಲ. ಇವತ್ತಿನ ಮಟ್ಟಿಗೆ ಕುಮಾರಸ್ವಾಮಿ ಅವರೆ ಸಿಎಂ ಇದ್ರೇನೆ ಒಳ್ಳೆಯದು ಎಂದು ಹೇಳಿದ್ದಾರೆ.

Comments are closed.