ರಾಷ್ಟ್ರೀಯ

‘ಮೋದಿನೇ ಅಧಿಕಾರದ ಖುರ್ಚಿ ಹಿಡಿಯುವುದು, ಎನ್​ಡಿಎನದ್ದೇ ಸರ್ಕಾರ, ಕಾಂಗ್ರೆಸ್​ಗೆ ಅವಕಾಶವೇ ಇಲ್ಲ!’’

Pinterest LinkedIn Tumblr


ಲೋಕಸಭಾ ಚುನಾವಣೆಗೆ ಇನ್ನೂ 59 ಕ್ಷೇತ್ರಗಳಿಗೆ ಮತದಾನ ನಡೆಯೋದು ಬಾಕಿಯಿದೆ. ಯಾರು ಅಧಿಕಾರದ ಕುರ್ಚಿ ಹಿಡಿಯುತ್ತಾರೆ ಅನ್ನೋ ಕುತೂಹಲ ಎಲ್ಲೆಡೆ ಮನೆಮಾಡಿದೆ. ಈ ಬಿಸಿ ಚರ್ಚೆ ಮಧ್ಯೆ ಬಿಜೆಪಿ ಈ ಬಾರಿ ಅತೀ ಹೆಚ್ಚು ಸ್ಥಾನ ಪಡೆಯುತ್ತೆ ಅಂತಾ ಖ್ಯಾತ ಚುನಾವಣಾ ತಜ್ಞ, Centre for the Study of Developing Societies ನಿರ್ದೇಶಕ ಸಂಜಯ್ ಕುಮಾರ್ ಹೇಳಿದ್ದಾರೆ.

ಬಿಜೆಪಿ ಅತೀ ಹೆಚ್ಚು ಸ್ಥಾನ ಪಡೆಯಲಿದೆ. ಜೊತೆಗೆ ಬಿಜೆಪಿ ನೇತೃತ್ವದ ಎನ್​ಡಿಎ ಬಹುಮತ ಗಳಿಸುವತ್ತ ಸಾಗುತ್ತದೆ. ಆದ್ರೆ ಕಾಂಗ್ರೆಸ್ 100 ಸ್ಥಾನ ಗಳಿಸುವುದು ಸಹ ಡೌಟ್​. 75 ರಿಂದ 80 ಸ್ಥಾನ ಮಾತ್ರ ‘ಕೈ’ ಪಕ್ಷದ ಪಾಲಾಗಲಿದೆ ಅಂತಾ ಇವರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೆ. ಆದ್ರೆ ಗುಜರಾತ್​, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ಹಿಮಾಚಲ ಪ್ರದೇಶ, ಉತ್ತರಾಖಂಡ್​ ಹಾಗೂ ದೆಹಲಿಯಲ್ಲಿ 2014ರಲ್ಲಿ ಗಳಿಸಿದ್ದಷ್ಟು ಸ್ಥಾನವನ್ನು 2019ರಲ್ಲಿ ಪಡೆಯಲ್ಲ ಎಂದಿದ್ದಾರೆ.

ಈ ಚುನಾವಣೆಯಲ್ಲಿ ಮೋದಿ ಪ್ರಚಾರದ ವೈಖರಿ ಬಗ್ಗೆಯೂ ಸಂಜಯ್ ಕುಮಾರ್ ಮಾತನಾಡಿದ್ದಾರೆ. ಒಂದು ಕ್ಷೇತ್ರದಲ್ಲಿ ಮೋದಿ ಜಾತಿ ವಿಚಾರವಿಟ್ಟು ಜನರ ವೋಟ್ ಸೆಳೆಯಲು ಯತ್ನಿಸುತ್ತಾರೆ. ಇನ್ನೊಂದೆಡೆ ಕಾಂಗ್ರೆಸ್​ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡ್ತಾರೆ. ಮತ್ತೊಂದೆಡೆ ರಾಜೀವ್ ಗಾಂಧಿ ನಂಬರ್ 1 ಭ್ರಷ್ಟಾಚಾರಿ ಎನ್ನುತ್ತಾರೆ. ಇನ್ನೂ ಕೆಲವೆಡೆ ಬಾಲಕೋಟ್​ ಏರ್​ಸ್ಟ್ರೈಕ್, ಪುಲ್ವಾಮಾದಲ್ಲಿ ಉಗ್ರರ ದಾಳಿ, ರಾಷ್ಟ್ರೀಯ ಭದ್ರತೆಯ ವಿಚಾರದ ಬಗ್ಗೆ ಭಾಷಣ ಮಾಡುತ್ತಾರೆ. ಮತ್ತೆ ಕೆಲವೆಡೆ ಮಹಾಘಟಬಂಧನ್​ ಹಾಗೂ ಪ್ರಾದೇಶಿಕ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸ್ತಾರೆ. ಹೀಗೆ ಒಂದೊಂದು ಕಡೆ ಒಂದೊಂದು ರೀತಿಯ ಅಸ್ತ್ರವನ್ನು ಪ್ರಯೋಗಿಸ್ತಿರುವುದು ಅವರ ರಣತಂತ್ರದ ಒಂದು ಭಾಗವಾಗಿದೆ ಅಂತಾ ಸಂಜಯ್​ ಕುಮಾರ್​ ಅಭಿಪ್ರಾಯಪಟ್ಟಿದ್ದಾರೆ.

Comments are closed.