
ನವದೆಹಲಿ: ಬಿಜೆಪಿ ಸರಳ ಬಹುಮತಕ್ಕಿಂತ ಹೆಚ್ಚಿನ ಸೀಟು ಗೆಲ್ಲಲಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಭವಿಷ್ಯ ನುಡಿದಿದ್ದಾರೆ. ಕಳೆದ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಬಿಜೆಪಿಗೆ ಭಾರೀ ಬಹುಮತ ಸಿಗಲಿದೆ. ಐದು ವರ್ಷಗಳ ಹಿಂದೆ ಜನರಿಗೆ ನೀಡಿದ್ದ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಈಡೇರಿಸಿದ್ಧಾರೆ. ಹಾಗಾಗಿ ಮತದಾರ ಈ ಸಲವೂ ಭಾರೀ ಬಹುಮತದೊಂದಿಗೆ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರು, ಪ್ರಧಾನಿ ಮೋದಿಯವರ ಮೇಲೆ ಜನರಿಗಿದ್ದ ಭರವಸೆ ಈಗ ನಂಬಿಕೆಯಾಗಿ ಪರಿವರ್ತನೆ ಆಗಿದೆ. ನಮ್ಮ ಆಡಳಿತದ ಕಳೆದ ಐದು ವರ್ಷಗಳಲ್ಲಿ ಎಲ್ಲಿಯೂ ಹಣದುಬ್ಬರ ಸಮಸ್ಯೆ ಎದುರಾಗಲಿಲ್ಲ. ಚುನಾವಣಾ ಪ್ರಚಾರ ಸಂದರ್ಭದಲ್ಲೂ ಎಲ್ಲಿಯೂ ಕೇಳಿ ಬರಲಿಲ್ಲ. ಈ ಸಾಧನೆ ಕೇಂದ್ರ ಸರ್ಕಾರದ ಹಣಕಾಸು ಸಾಮರ್ಥ್ಯವನ್ನು ತೋರಿಸುತ್ತದೆ’ ಎಂದರು.
ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್ ಅವರು, ಮಮತಾ ಬ್ಯಾನರ್ಜಿಯವರ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಜಾಪ್ರಭುತ್ವದಲ್ಲಿ ಯಾವುದೇ ರೀತಿಯ ರಾಜಕೀಯ ಹಿಂಸಾಚಾರಕ್ಕೆ ಜಾಗವಿಲ್ಲ. ಯಾಕೋ ಗೊತ್ತಿಲ್ಲ ಪಶ್ಚಿಮ ಬಂಗಾಳದಲ್ಲಿ ಮಾತ್ರ ಪದೇಪದೇ ಈ ರೀತಿ ಘಟನೆಗಳು ನಡೆಯುತ್ತಿವೆ. ಇದಕ್ಕೆ ನೇರಹೊಣೆ ಇಲ್ಲಿನ ಸರ್ಕಾರ ಮತ್ತು ಸಿಎಂ ಎಂದು ಮಮತಾ ಬ್ಯಾನರ್ಜಿಯವರತ್ತ ಬೆಟ್ಟು ಮಾಡಿದರು.
ಹಾಗೆಯೇ ಬಿಜೆಪಿ ಹಿಂದೂ ಭಯೋತ್ಪಾದನೆಯನ್ನು ಕುಮಕ್ಕು ನೀಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೂ ಸಿಂಗ್ ಪ್ರತಿಕ್ರಿಯಿಸಿದರು. ಭಯೋತ್ಪಾದನೆ ಎಂದರೇ ಭಯೋತ್ಪಾದನೆಯೇ. ಅದಕ್ಕೆ ಇದೇ ರೀತಿ ಧರ್ಮ ಎಂಬುದಿಲ್ಲ. 2008ರಲ್ಲೂ ಕಾಂಗ್ರೆಸ್ ಇದೇ ರೀತಿ ಹೇಳಿಕೆ ನೀಡಿತ್ತು. ಪ್ರತಿನಿತ್ಯ ಹೀಗೆ ಕಾಂಗ್ರೆಸ್ ನೀಡುವ ಮೂಲಕ ಬಿಜೆಪಿ ಹೋರಾಟವನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಕಿಡಿಕಾರಿದರು.
543 ಲೋಕಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟ ಬಹುಮತ ಪಡೆಯಲು 273 ಸ್ಥಾನ ಗೆಲ್ಲಬೇಕು. ಆದರೆ, ಎನ್ಡಿಎ ಈ ಬಾರಿ 233 ಸ್ಥಾನ ಗೆಲ್ಲಲು ಮಾತ್ರ ಯಶಸ್ವಿಯಾಗಲಿದೆ ಎನ್ನಲಾಗಿದೆ. ಕಾಂಗ್ರೆಸ್ ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ನೀಡಲಿದ್ದು, 167 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ. ಇನ್ನು, ತೃತೀಯ ರಂಗದವರು 143 ಸ್ಥಾನ ಗೆಲ್ಲಲಿದ್ದು, ಈ ಬಾರಿ ಅವರೇ ಕಿಂಗ್ ಮೇಕರ್ ಆಗುವ ಎಲ್ಲ ಲಕ್ಷಣ ಗೋಚರವಾಗಿದೆ.
Comments are closed.