ಕರ್ನಾಟಕ

ಅಮ್ಮಂದಿರ ದಿನ: ಮನಮುಟ್ಟುವಂತಿದೆ ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡು

Pinterest LinkedIn Tumblr


ಇಂದು ವಿಶ್ವ ತಾಯಂದಿರ ದಿನ. ಈ ದಿನದ ಪ್ರಯುಕ್ತ ‘ವಿಜಯರಥ’ ಚಿತ್ರತಂಡ ಅಮ್ಮಂದಿರಿಗಾಗಿ ಪುಟ್ಟ ಕಾಣಿಕೆಯೊಂದನ್ನು ನೀಡಿದೆ. ಅಮ್ಮಂದಿರ ತ್ಯಾಗ ನಲಿವು ನೋವುಗಳನ್ನು ಬಣ್ಣಿಸುವ ವಿಶೇಷ ಗೀತೆಯನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ತಾಯಂದಿರ ದಿನವನ್ನು ಅವಿಸ್ಮರಣೀಯವಾಗಿಸುವಲ್ಲಿ ಸಿನಿಮಾ ತಂಡ ಯಶಸ್ವಿಯಾಗಿದೆ .

ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ಮೂಡಿ ಬಂದಿರುವ ಈ ಗೀತೆಗೆ ರಾಗ ಸಂಯೋಜಿಸಿದ್ದು ಪ್ರೇಮ್​ ಕುಮಾರ್. ಈ ಸಂಗೀತಕ್ಕೆ ‘ಕಂದನ ಮೊದಲ ನುಡಿಯೇ ಅಮ್ಮಾ.. ‘ ಎಂಬ ಅದ್ಭುತ ಸಾಲುಗಳನ್ನು ಒದಗಿಸಿರುವುದು ಸಾಹಿತಿ ಎಸ್​.ಎಲ್ ಚಂದ್ರು.

ತಾಯಿಯ ಮಮತೆಯನ್ನು ಸಾರಿ ಹೇಳಿರುವ ಈ ಗೀತೆಯು ಈಗಾಗಲೇ ಹಲವರ ಮನ ಮುಟ್ಟಿದ್ದು, ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ‘ವಿಜಯರಥ’ ಎಂಬ ಸಿನಿಮಾ ಸಸ್ಪೆನ್​ ಒಳಗೊಂಡ ಲವ್​ಸ್ಟೋರಿಯನ್ನು ಹೊಂದಿದ್ದು, ಇದರಲ್ಲಿ ಬರುವ ತಾಯಿ ಜೊತೆಗಿನ ಸೆಂಟಿಮೆಂಟ್​ನಲ್ಲಿ ಈ ಗೀತೆ ಮೂಡಿ ಬರಲಿದೆ.

ಈ ಚಿತ್ರಕ್ಕೆ ಅಜಯ್ ಸೂರ್ಯ ಎಂಬ ನವ ನಿರ್ದೇಶಕ ಆ್ಯಕ್ಷನ್ ಕಟ್ ಹೇಳಿದ್ದು, ‘ಧೈರ್ಯಂ’ ಚಿತ್ರದಲ್ಲಿ ಅಜೇಯ್ ಕೃಷ್ಣ ಅವರ ಗೆಳೆಯನಾಗಿ ಕಾಣಿಸಿಕೊಂಡ ವಸಂತ್ ಕಲ್ಯಾಣ್ ‘ವಿಜಯರಥ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ತೆರೆ ಮೇಲೆ ಬರಲಿದ್ದಾರೆ. ಅಮ್ಮನನ್ನು ಗುಣಗಾನ ಮಾಡಿರುವ ಈ ಗೀತೆಯನ್ನು ‘ವಿಜಯರಥ’ ಚಿತ್ರತಂಡವು ವಿಶ್ವದ ಎಲ್ಲಾ ಅಮ್ಮಂದಿರಿಗೆ ಅರ್ಪಿಸಿರುವುದು ವಿಶೇಷ.

Comments are closed.