
ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ಮೂರು ವರ್ಷಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅದಕ್ಕೆ ನಿರಾಕರಿಸಿದರಿಂದ ಸ್ನೇಹಿತರ ಮುಂದೆ ಪಾಗಲ್ ಪ್ರೇಮಿ ಕೆನ್ನೆಗೆ ಬಾರಿಸಿದ್ದು ಇದರಿಂದ ನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೃಷ್ಣರಾಜಪುರದ ಅಕ್ಷಯನಗರದ ಶ್ರೀನಿವಾಸ್ ಮೂರ್ತಿ ಅವರ ಸಾಕು ಮಗಳು 17 ವರ್ಷದ ಲೀನಾ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿ. ಈಕೆಗೆ ಮಂಜುನಾಥ್ ಎಂಬಾತ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಬಾಣಸವಾಡಿಯ ಸಿಎಂಆರ್ ಕಾಲೇಜಿನಲ್ಲಿ ಲೀನಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಲೀನಾ 10ನೇ ತರಗತಿಯಲ್ಲಿ ಓದುತ್ತಿದ್ದಾಗ ಆರೋಪಿ ಮಂಜುನಾಥ್ ಆಕೆಗೆ ಸಹಪಾಠಿ ಆಗಿದ್ದನು. ಹೀಗಾಗಿ ತನ್ನನ್ನು ಪ್ರೀತಿಸುವಂತೆ ಲೀನಾಳಿಗೆ ಒತ್ತಾಯಿಸುತ್ತಿದ್ದನು. ಪ್ರತಿನಿತ್ಯ ಕಾಲೇಜು, ಮನೆಯ ಹತ್ತಿರ ಹೋಗಿ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದಕ್ಕೆ ಒಪ್ಪಿಕೊಳ್ಳದ ಲೀನಾ ಮೇಲೆ ಹಲ್ಲೆ ಮಾಡಿದ್ದನು.
Comments are closed.