ಕರಾವಳಿ

ಶ್ರೀ ಕೇತ್ರ ಕದ್ರಿಯ ಬ್ರಹ್ಮಕಲಶೋತ್ಸವಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಹೆಗ್ಗಡೆಯವರಿಗೆ ಅಹ್ವಾನ- ನಾಳೆ ಶ್ರೀ ಕೇತ್ರದಲ್ಲಿ ಪೂರ್ವಭಾವಿ ಸಭೆ

Pinterest LinkedIn Tumblr

ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಮೇ 2ರಿಂದ 11ರವರೆಗೆ ಜರಗುವ ಬ್ರಹ್ಮಕಲಶೋತ್ಸವ, ಮಹಾರುದ್ರಯಾಗ, ಮಹಾದಂಡರುದ್ರಾಭೀಷಕದ‌ ಆಮಂತ್ರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರಿಗೆ ನೀಡುವ ಮೂಲಕ ಆಮಂತ್ರಿಸಲಾಯಿತು.

ಈ ವೇಳೆ ಬ್ರಹ್ಮಕಲಶೋತ್ಸವ ಸಮಿತಿಯ‌ ಅಧ್ಯಕ್ಷ ಎ. ಜೆ. ಶೆಟ್ಟಿ, ಎಸ್. ಪ್ರಮುಖರಾದ ಎಸ್. ಪ್ರದೀಪ ಕುಮಾರ ಕಲ್ಕೂರ‌, ಅರುಣ್‌ಕುಮಾರ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಎ. 20. ಶನಿವಾರ ಪೂರ್ವಭಾವಿ ಸಭೆ;

ಮೇ ತಿಂಗಳ ತಾ. 2ರಿಂದ 11ರವರೆಗೆಕದ್ರಿ ಶ್ರೀ ಮಂಜುನಾಥದೇವಸ್ಥಾನದಲ್ಲಿಜರಗಲಿರುವ ಬ್ರಹ್ಮಕಲಶೋತ್ಸವ, ಮಹಾರುದ್ರಯಾಗ ಹಾಗೂ ಮಹಾದಂಡರುದ್ರಾಭಿಷೇಕದ ಪ್ರಯುಕ್ತ ಹೊರೆಕಾಣಿಕೆ ಸಂಗ್ರಹದ ಬಗ್ಗೆ ಪೂರ್ವಭಾವಿ ಸಭೆಯು‌ಇಂದು ಶನಿವಾರತಾ. ೨೦, ಬೆಳಿಗ್ಗೆ 10.45ಕ್ಕೆ ಶ್ರೀ ಕ್ಷೇತ್ರಕದ್ರಿಯಲ್ಲಿಜರಗಲಿರುವುದು.

ಜೀರ್ಣೋದ್ದಾರ ಸಮಿತಿಯ‌ಅಧ್ಯಕ್ಷರಾದ‌ಎ.ಜೆ. ಶೆಟ್ಟಿ‌ಅವರ ಮಾರ್ಗದರ್ಶನದಲ್ಲಿ ಸಭೆಜರಗಲಿದ್ದು. ಹೊರೆಕಾಣಿಕೆ ಸಮಿತಿಯ‌ ಅಧ್ಯಕ್ಷ ಗಣೇಶ್  ಶೆಟ್ಟಿ‌ ಅಧ್ಯಕ್ಷತೆ ವಹಿಸಲಿರುವರು.

ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಲ್ಲದೆ, ಅನೇಕ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಲಿರುವರು. ಭಕ್ತಾದಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯ ಮೂಲಕ ವಿನಂತಿಸಿರುವರು.

Comments are closed.