ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಕೆಲವೆಡೆ ಗಾಂಜಾ ಕ್ರಯ-ವಿಕ್ರಯ ಹಾಗೂ ಗಾಂಜಾ ಸೇದುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದ್ದು ಗಾಂಜಾ ಹಾವಳಿಯಿಂದ ಜನರು ಕಂಗಾಲಾಗಿದ್ದಾರೆ. ಗಾಂಜಾ ಅಮಲಿನಲ್ಲಿದ್ದ ಇಬ್ಬರು ಆರೋಪಿಗಳು ಬೈಂದೂರು ಪೊಲೀಸರ ಅತಿಥಿಯಾಗಿದ್ದಾರೆ.


ಬೈಂದೂರು ಪಿಎಸ್ಐ ತಿಮ್ಮೇಶ ಬಿ.ಎನ್. ಅವರು ತಾಲೂಕಿನ ಗಡಿಭಾಗವಾದ ಶಿರೂರು ಕಡೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿರೂರು ಮಾರ್ಕೇಟ್ ಬಳಿ ಇಬ್ಬರು ವ್ಯಕ್ತಿಗಳು ಅಮಲಿನಲ್ಲಿರುವುದು ಗಮನಕ್ಕೆ ಬಂದಿದ್ದು ಅವರನ್ನು ವಿಚಾರಿಸಿದಾಗ ತೊದಲುತ್ತಾ ಪ್ರದೀಪ ಹಾಗೂ ಪಾಂಡುರಂಗ ಎಂದು ಹೇಳಿದ್ದರು. ಅನುಮಾನಗೊಂಡು ಅವರಿಬ್ಬರನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿದ್ದು ಇಬ್ಬರು ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದಿತ್ತು.
ಇಬ್ಬರನ್ನು ಸ್ಥಳದಲ್ಲಿ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿ ಹೆಚ್ಚಿನ ತನಿಖೆ ನಿಟ್ಟಿನಲ್ಲಿ ಪ್ರೊಫೆಸರ್ ಅಂಡ್ ಹೆಡ್ ಕೆಎಂಸಿ ಪೊರೆನ್ಸಿಕ್ ವಿಭಾಗದವರಿಂದ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. ಆ ವರದಿಯಲ್ಲಿ ಪ್ರದೀಪ್ ಕುಮಾರ್ ಹಾಗೂ ಪಾಂಡುರಂಗ ಖಾರ್ವಿ ಗಾಂಜಾ ಸೇವಿಸಿರುವ ಬಗ್ಗೆ ವೈದ್ಯರು ದೃಢ ಪತ್ರ ನೀಡಿದ್ದರು.
ಆಪಾದಿತರ ವಿರುದ್ದ ಬೈಂದೂರು ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಆಕ್ಟ್ರಂತೆ ಪ್ರಕರಣ ದಾಖಲಾಗಿದೆ.
Comments are closed.