
ನವದೆಹಲಿ: ಮುಂಬೈನಲ್ಲಿ ಇತ್ತೇಚೆಗೆ ನಡೆದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಭಾರತದ ಪ್ರತಿಷ್ಠಿತ ಐಐಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೋರ್ವ ಬಾತ್ ರೂಂ ಕಿಟಕಿಯಲ್ಲಿ ಮೊಬೈಲ್ ಇರಿಸಿ ಮಹಿಳೆಯ ಸ್ನಾನದ ವಿಡಿಯೋ ಸೆರೆ ಹಿಡಿಯುತ್ತಿದ್ದ ಎಂದು ಆರೋಪಿಸಲಾಗಿದೆ. ಥಾಣೆಯ ನಿವಾಸಿ ಅವಿನಾಶ್ ಕುಮಾರ್ ಎಂಬಾತ ಈ ಕೃತ್ಯ ಎಸಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಐಪಿಸಿ 354 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಪುರ್ಬವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತಾನು ವಾಸಿಸುತ್ತಿದ್ದ ಪಕ್ಕದ ಮನೆಯೊಂದರ ಬಾತ್ ರೂಂ ಕಿಟಿಕಿಯಲ್ಲಿ ಮೊಬೈಲ್ ಇರಿಸಿ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಮಹಿಳೆ ಸ್ನಾನ ಮಾಡಲು ಬಾತ್ ರೂಂಗೆ ತೆರಳಿದ್ದ ಸಂದರ್ಭದಲ್ಲಿ ಕಿಟಕಿಯಲ್ಲಿದ್ದ ಮೊಬೈಲ್ ಕಂಡಿದೆ. ಬಳಿಕ ಕೂಡಲೇ ಮಹಿಳೆ ತನ್ನ ಗಂಡನ ಗಮನಕ್ಕೆ ತಂದಿದ್ದಾರೆ.
ಬಳಿಕ ಕೂಡಲೇ ಮೊಬೈಲ್ ಜತೆಗೆ ಸೀದಾ ಪೊಲೀಸ್ ಠಾಣೆಯತ್ತ ತೆರಳಿದ ದಂಪತಿ ದೂರು ನೀಡಿದ್ದಾರೆ. ಮಹಿಳೆ ದಂಪತಿ ನೀಡಿದ ದೂರು ಅನ್ವಯ ಇದೀಗ 34 ವರ್ಷದ ಮುಂಬೈ ಐಐಟಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. ಮೊಬೈಲ್ ಅನ್ನು ಪರಿಶೀಲಿಸಿದ ಪೊಲೀಸರು, ಇದರಲ್ಲಿ ಸುಮಾರು ಮಹಿಳೆಯರ ವಿಡಿಯೋ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಆತನನ್ನು ಬಂಧಿಸಿದ ಕಪುರ್ಬವಾಡಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಈ ಮುನ್ನವೇ ವಿದ್ಯಾರ್ಥಿ ಹಲವು ಮಹಿಳೆಯರ ವಿಡಿಯೋ ಚಿತ್ರೀಕರಿಸಿದ್ದ ಎನ್ನುತ್ತಿವೆ ಪೊಲೀಸ್ ಮೂಲಗಳು.
Comments are closed.