ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ರಾಹುಲ್, ವಿಜಯ್’ರನ್ನು ಕೈಬಿಟ್ಟ ಟೀಂ ಇಂಡಿಯಾ

Pinterest LinkedIn Tumblr

ನವದೆಹಲಿ: ಮೆಲ್ಬರ್ನ್ ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಆಟಗಾರರ ಹೆಸರನ್ನು ಬಿಸಿಸಿಐ ಪ್ರಕಟಿಸಿದ್ದು, ಸತತ ವೈಫಲ್ಯ ಕಾಣುತ್ತಿರುವ ಕೆ.ಎಲ್. ರಾಹುಲ್ ಹಾಗೂ ವಿಜಯ್ ಗೆ ಗೇಟ್ ಪಾಸ್ ನೀಡಲಾಗಿದೆ.

ಗಾಯದಿಂದ ಸಮಸ್ಯೆಯಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ತಂಡಕ್ಕೆ ವಾಪಾಸ್ಸಾಗಲಿದ್ದಾರೆ. ಮಯಾಂಕ್ ಅಗರ್ ವಾಲ್ ಚೊಚ್ಚಲ ಟೆಸ್ಟ್ ಪಂದ್ಯ ಆಡಲಿದ್ದಾರೆ.

ಕೆ.ಎಲ್. ರಾಹುಲ್ ಹಾಗೂ ಮುರಳಿ ವಿಜಯ್ ಎರಡು ಟೆಸ್ಟ್ ಪಂದ್ಯಗಳ 8 ಇನ್ಸಿಂಗ್ಸ್ ನಲ್ಲಿ ಕೇವಲ 95 ರನ್ ಗಳಿಸಿದ್ದಾರೆ.ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರಿಗೆ ಉತ್ತಮ ಸಾಥ್ ನೀಡುವಲ್ಲಿಯೂ ಇವರು ವಿಫಲವಾಗಿದ್ದು, ಮೂರನೇ ಟೆಸ್ಟ್ ಪಂದ್ಯದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ಮಯಾಂಕ್ ಅಗರ್ ವಾಲ್ ಓಪನಿಂಗ್ ಬ್ಯಾಟ್ಸ್ ಮನ್ ಆಗಿ ಹನುಮ ವಿಹಾರಿ ಜೊತೆಗೆ ಆಟವಾಡುವ ಸಾಧ್ಯತೆ ಇದೆ.

ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ 1-1 ಅಂಕಗಳಿಂದ ಸಮಬಲ ಹೊಂದಿದ್ದು, ಮೆಲ್ಬರ್ನ್ ಮೈದಾನದಲ್ಲಿ ಸುಮಾರು 90 ಸಾವಿರ ಕ್ರಿಕೆಟ್ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.

ಟೀಂ ಇಂಡಿಯಾ ಆಟಗಾರರ ವಿವರ ಇಂತಿದೆ. ವಿರಾಟ್ ಕೊಹ್ಲಿ ( ನಾಯಕ) ಅಜಿಂಕ್ಯಾ ರಹಾನೆ ( ಉಪನಾಯಕ) ಮಾಯಾಂಕ್ ಅಗರ್ ವಾಲ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರಿ, ರೋಹಿತ್ ಶರ್ಮಾ, ರಿಷಭ್ ಪಂತ್ (ವಿಕೆಟ್ ಕೀಪರ್ ) ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ಪ್ರೀತ್ ಬ್ರೂಮಾ.

Comments are closed.