ಕರಾವಳಿ

ಡಿ.23ರಿಂದ 30 : ಕುಲಶೇಖರದಲ್ಲಿ ಲೋಕ ಕಲ್ಯಾಣಾರ್ಥ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗ

Pinterest LinkedIn Tumblr

ಮಂಗಳೂರು: ಕುಲಶೇಖರ ಕೈಕಂಬ ಹಿಂದೂ ಯುವ ಸೇನೆ ಆಶ್ರಯದಲ್ಲಿ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗ ಸಮಿತಿ ವತಿಯಿಂದ ಡಿ.23 ರಿಂದ 30ರ ವರೆಗೆ ಲೋಕ ಕಲ್ಯಾಣಾರ್ಥ ಶ್ರೀ ಸಗ್ರಹಮುಖ ಶನೈಶ್ವರ ಮಹಾಯಾಗ ಪದವು ಮೇಗಿನ ಮನೆ ವಠಾರದಲ್ಲಿ ಏರ್ಪಡಿಸಲಾಗಿದೆ.

ಯಾಗ ನಡೆಯುವ ಸ್ಥಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಯಾಗದ ಬಗ್ಗೆ ವಿವರ ನೀಡಿದ ಸಮಿತಿಯ ಗೌರವಾಧ್ಯಕ್ಷ ಮೋನಪ್ಪ ಭಂಡಾರಿ ಅವರು, ಮಹಾಯಾಗದ ಪೂರ್ವಭಾವಿಯಾ ಡಿ 23 ರಂದು ಬೆಳಗ್ಗೆ 10 ಕ್ಕೆ ಶ್ರೀ ಶನಿದೇವರ ವಿಗ್ರಹ ಮತ್ತು ಬೃಹತ್ ಹೊರೆಕಾಣಿಕೆ ಶೋಭಾಯಾತ್ರೆ ಶರವು ಮಹಾಗಣಪತಿ ದೇವಸ್ಥಾನದಿಂದ ಹೊರಡಲಿದೆ. ಮಧ್ಯಾಹ್ನ 3.30ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದೆ ಎಂದು ತಿಳಿಸಿದರು.

ಡಿ.24 ರಂದು ಬೆಳಗ್ಗೆ 10ಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಅಧ್ಯಕ್ಷ ಎಸ್.ಗಣೇಶ್ ರಾವ್ ಯಾಗ ಉದ್ಘಾಟಿಸಲಿದ್ದಾರೆ. ಬಾಳಂಭಟ್ ಮನೆತನದ ವೇ.ಮೂ.ನಾರಾಯಣ ಭಟ್ ಪೌರೋಹಿತ್ಯದಲ್ಲಿ 80ಕ್ಕೂ ಹೆಚ್ಚು ವೈದಿಕರ ತಂಡದಿಂದ ಯಾಗ ನಡೆಯಲಿದೆ.ಡಿ 29 ರಂದು ಬೆಳಗ್ಗೆ 11ಕ್ಕೆ ಪೂರ್ಣಾಹುತಿ. ಡಿ.30 ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ, ವಿಸರ್ಜನ ಪೂಜೆ, ಸಂಜೆ 6ಕ್ಕೆ ಶ್ರೀ ಶನಿದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆಯಲಿದೆ.

ಸಂಜೆ 6.00ಕ್ಕೆ ಶ್ರೀ ಶನಿದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ಶಿವಾಜಿ ಮಂಟಪದಿಂದ ವಿವಿಧ ವಾದ್ಯಾಘೋಷಗಳೊಂದಿಗೆ ಹೊರಟು ರಥ ಬೀದಿ ಮಹಮ್ಮಾಯಿ ಕೆರೆಯಲ್ಲಿ ವಿಗ್ರಹದ ಜಲಸ್ತಂಭನವಾಗಲಿದೆ ನಿತ್ಯ ಮಧ್ಯಾಹ್ನ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.1.20 ಲಕ್ಷ ಚದರಡಿ ವಿಸ್ತೀರ್ಣದ ಸ್ಥಳಾವಕಾಶ ಸಿದ್ದಪಡಿಸಲಾಗಿದೆ.ಯಾಗಕ್ಕೆ ಸುಮಾರು 2,500 ಚದರ ಆಡಿ ಜಾಗವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಮೋನಪ್ಪ ಭಂಡಾರಿ ವಿವರಿಸಿದರು.

ವೈದಿಕ ಸಮಿತಿಯ ಪ್ರಮುಖರು ಹಾಗೂ ಯಾಗದ ಪುರೋಹಿತರಾದ ಎಂ.ಗಿರಿಧರ್ ಭಟ್ ಯಾಗದ ಬಗ್ಗೆ ಪೂರಕ ಮಾಹಿತಿಗಳನ್ನು ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯಧ್ಯಕ್ಷ ಎಚ್.ಕೆ.ಪುರುಷೋತ್ತಮ, ಸಂಚಾಲಕ ರಾಮಚಂದ್ರ ಚೌಟ ಪದವು, ಗೌರವಾಧ್ಯಕ್ಷ ವಾಸುದೇವ ಆರ್.ಕೊಟ್ಟಾರಿ, ಉಪಾಧ್ಯಕ್ಷ ಉಮೆಶ್ ರೈ ಪದವು ಮೇಗಿನ ಮನೆ ,ಅಶ್ವಿತ್ ಕೊಟ್ಟಾರಿ ಉಪಸ್ಥಿತರಿದ್ದರು. ಮಾದ್ಯಮ ಸಮಿತಿ ಸಂಚಾಲಕ ಪ್ರವೀಣ್.ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ ವಂದಿಸಿದರು.

Comments are closed.