ಮನೋರಂಜನೆ

ಅನುಷ್ಕಾ ಶೆಟ್ಟಿ ಜೊತೆಗಿನ ಸಂಬಂಧ ಕುರಿತು ಮಾತನಾಡಿದ ಪ್ರಭಾಸ್

Pinterest LinkedIn Tumblr


ಮುಂಬೈ: ಬಾಹುಬಲಿ ನಟ ಪ್ರಭಾಸ್ ಅವರು ತಮ್ಮ ಗೆಳತಿ ಅನುಷ್ಕಾ ಶೆಟ್ಟಿ ಜೊತೆಗಿನ ಸಂಬಂಧದ ರಹಸ್ಯ ಬಿಚ್ಚಿಟ್ಟಿದ್ದಾರೆ.

ನಿರ್ದೇಶಕ ಕರಣ್ ಜೋಹರ್ ನಡೆಸಿ ಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಪ್ರಭಾಸ್ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಭಾಸ್ ಜೊತೆ ಬಾಹುಬಲಿ ಚಿತ್ರದ ನಿರ್ದೇಶಕ ರಾಜಮೌಳಿ ಹಾಗೂ ರಾಣಾ ದಗ್ಗುಬಾಟಿ ಕೂಡ ಪಾಲ್ಗೊಂಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ, ನೀವು ಸಿಂಗಲ್ ಆಗಿದ್ದೀರಾ? ನಿಮ್ಮ ಮತ್ತು ಅನುಷ್ಕಾ ಡೇಟಿಂಗ್ ಸುದ್ದಿ ನಿಜಾವೇ ಎಂದು ಪ್ರಭಾಸ್ ಅವರನ್ನು ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಪ್ರಭಾಸ್, ನಾನು ಸಿಂಗಲ್ ಎಂದು ಉತ್ತರಿಸಿದ್ದಾರೆ. ನಂತರ ಕರಣ್ ರ‍್ಯಾಪಿಡ್ ಫೈರ್ ರೌಂಡ್‍ನಲ್ಲಿ ಕರಣ್ ಅವರು ಪ್ರಭಾಸ್ ನೀವು ಈ ಸೋಫಾದಲ್ಲಿ ಕುಳಿತು ಸುಳ್ಳು ಹೇಳಿದ್ದೀರಿ ಅಲ್ಲವೇ ಎಂದು ಪ್ರಶ್ನಿಸಿದರು. ಆಗ ಪ್ರಭಾಸ್ ಹೌದು ಎಂದು ಹೇಳಿ ಎಲ್ಲರ ಮುಂದೆ ಜೋರಾಗಿ ನಕ್ಕಿದ್ದಾರೆ.

ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ದಕ್ಷಿಣ ಭಾರತದ ನಟರು ಭಾಗಿಯಾಗಿದ್ದಾರೆ. ಬಾಹುಬಲಿ ಚಿತ್ರತಂಡ ಜೊತೆ ಕರಣ್ ನಡೆಸಿಕೊಟ್ಟ ಈ ಸಂಚಿಕೆ ಡಿಸೆಂಬರ್ ತಿಂಗಳ ಕೊನೆಯಲ್ಲಿ ಪ್ರಸಾರವಾಗಲಿದೆ. ಪ್ರಭಾಸ್ ಅವರಿಗೆ 38 ವರ್ಷವಾಗಿದ್ದು, ಸಲ್ಮಾನ್ ಖಾನ್ ಅವರಂತೆ ಪ್ರಭಾಸ್ ಅವರನ್ನು ಅಭಿಮಾನಿಗಳು ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಎಂದು ಕರೆಯುತ್ತಿದ್ದಾರೆ.

Comments are closed.