
ಮಂಗಳೂರು : ಮಾಜಿ ಸಂಸದ ಮತ್ತು ಹಿರಿಯ ಕಾಂಗ್ರೇಸ್ ನಾಯಕರಾದ ಬಿ.ಜನಾರ್ದನ ಪೂಜಾರಿ ಯವರು ಇತ್ತೀಚಿಗೇ ಅಯೋಧ್ಯೆಯ ಬಾಬ್ರಿಮಸೀದಿ ಮತ್ತು ರಾಮ ಜನ್ಮ ಭೂಮಿ ವಿವಾದಿತ ವ್ಯಾಜ್ಯ ಸುಪ್ರೀಂ ಕೋರ್ಟ್ನಲ್ಲಿ ಇತ್ಯರ್ಥಕ್ಕೇ ಬಾಕಿಯಿರುವ ಈ ಸಂಧರ್ಭದಲ್ಲಿ ಮಂಗಳೂರಿನಲ್ಲಿನ ಸಾಮಾಜಿಕ ಸಭೆಯೊಂದರಲ್ಲಿ ಈ ಬಗ್ಗೆ ಹೇಳಿಕೆ ನೀಡುವ ಮೂಲಕ ಕೋರ್ಟ್ ನಿಂದನೆ ಮಾಡಿದ್ದಾರೆ ಎಂದು ಮಾಜಿ ಮೇಯರ್ ಹಾಗೂ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಪೂಜಾರಿ ತಮ್ಮ ಹೇಳಿಕೆ ಮೂಲಕ ಒಂದು ನಿರ್ಧಿಷ್ಟ ಸಮುದಾಯದ ವಿರುದ್ದ ಮತ್ತು ಇನ್ನೊಂದು ಸಮುದಾಯದ ಪರ ಮಾತನಾಡಿ, ಅವರನ್ನು ನಿರಂತರ ದಶಕಗಳಿಂದ ಚುನಾವಣೆಯಲ್ಲಿ ಬೇಂಬಲಿಸುತ್ತಾ ಬಂದಿರುವ ಒಂದು ನಿಷ್ಟೆಯ ಸಮುದಾಯದ ಧಾರ್ಮಿಕ ಭಾವನೆ ಮತ್ತು ನಂಬಿಕೆಗೆ ತೀವ್ರ ಘಾಸಿ ಉಂಟು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜನಾರ್ಧನ ಪೂಜಾರಿಯವರ ಈ ವಿವಾದಾತ್ಮಕ ಹೇಳಿಕೆಯಿಂದಾಗಿ ಮುಸ್ಲಿಂ ಅಲ್ಪ ಸಂಖ್ಯಾತ ಸಮುದಾಯವು ಅವರು ಪ್ರತಿನಿಧಿಸುತ್ತಿರುವ ಪಕ್ಷಕ್ಕೆ ಹಾಗೂ ಪಕ್ಷದ ಸಿದ್ದಾಂತಕ್ಕೆ ತೀವ್ರ ಹಾನಿ ಉಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ, ಹಿರಿಯ ರಾಜಕೀಯ ನಾಯಕರಾಗಿ ಅವರ ನಡೆ ಸಂಶಯಕ್ಕೇ ಎಡೆ ಮಾಡಿದೆ.
ಮುಸ್ಲಿಂ ಅಲ್ಪ ಸಂಖ್ಯಾತ ಮತದಾರರು ಈ ರೀತಿಯ ಧ್ವಂದ ನಿಲುವು ಹೊಂದಿದ ನಾಯಕರನ್ನು ವಿಶ್ವಾಸ ಕಳೆದುಕೊಳ್ಳುವ ಕಾಲ ದೂರವಿಲ್ಲ. ಜನಾರ್ದನ ಪೂಜಾರಿಯವರ ದ್ವಂದ ನಿಲುವಿನ ಬಗ್ಗೆ ಜಿಲ್ಲೆ ಮತ್ತು ರಾಜ್ಯ ಮುಸ್ಲಿಂ ಅಲ್ಪ ಸಂಖ್ಯಾತ ಕಾಂಗ್ರೇಸ್ ನಾಯಕರು ಮೌನ ಮುರಿದು ತಕ್ಷಣ ಪ್ರತಿಕ್ರೀಯಿಸಲಿ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಅಶ್ರಫ್ ಸವಾಲೆಸೆದಿದ್ದಾರೆ.
Comments are closed.