ರಾಷ್ಟ್ರೀಯ

2019ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಬಿಜೆಪಿಗೆ ಶಾಕ್ ನೀಡಿದ ಸಚಿವೆ ಸುಷ್ಮಾ ಸ್ವರಾಜ್​

Pinterest LinkedIn Tumblr

ನವದೆಹಲಿ : ಚುನಾವಣಾ ರಾಜಕೀಯದಿಂದ ದೂರಸರಿಯಬೇಕೆಂದು ನಿರ್ಧಾರ ಮಾಡಿದ್ದು., 2019ರ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ತಿಳಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ಕುರಿತು ಪಕ್ಷ ನಿರ್ಧಾರಿಸಲಿದೆ, ಆದರೆ, ನಾನು ಯಾವುದೇ ಕಾರಣಕ್ಕೆ ಸ್ಪರ್ಧಿಸಬಾರದು ಎಂದು ಮುಂದಿನ ಚುನಾವಣೆಯಲ್ಲಿ ತೀರ್ಮಾನಿಸಿದ್ದೇನೆ ಎಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಅವರು ತಿಳಿಸಿದ್ದಾರೆ.

ಸುಷ್ಮಾ ಅವರ ಈ ನಿರ್ಧಾರಕ್ಕೆ ಕಾರಣ ಅವರ ಆರೋಗ್ಯ. 66 ವರ್ಷದ ಸುಷ್ಮಾ ಆರೋಗ್ಯ ಕ್ಷೀಣಿಸಿದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಎದುರು ಸುಷ್ಮಾ ಸ್ವರಾಜ್​​ ಈ ನಿರ್ಧಾರ ತಿಳಿಸಿದ್ದು, ಪಕ್ಷ ಅವರನ್ನು ಮುಂದಿನ ಬಾರಿ ರಾಜ್ಯಸಭಾ ಮೂಲಕ ಸಂಸತ್ತಿಗೆ ಕಳುಹಿಸುವ ಸಾಧ್ಯತೆ ಇದೆ. ಮಧ್ಯಪ್ರದೇಶದ ವಿಡಿಶಾ ಲೋಕಸಭಾ ಕ್ಷೇತ್ರವನ್ನು ಪ್ರಸ್ತುತ ಅವರು ಪ್ರತಿನಿಧಿಸುತ್ತಿದ್ದಾರೆ.

Comments are closed.