ಮನೋರಂಜನೆ

ಬಾಲಿವುಡ್ ನಟಿ ಕರೀನಾ ಕಪೂರ್​ ಖಾನ್​ ಫಿಟ್ನೆಸ್​ 5 ಸಿಕ್ರೇಟ್​

Pinterest LinkedIn Tumblr


ಫಿಟ್ನೆಸ್​ ಎನ್ನುವ ಮಾತು ಬಂದರೆ ಕರೀನಾ ಅದರಲ್ಲಿ ಶಿಸ್ತಿನ ಸಿಪಾಯಿ.​ ತಮ್ಮ ಅಮೂಲ್ಯವಾದ ಸಮಯಗಳನ್ನ ಕರೀನಾ ಹೆಚ್ಚು ಜಿಮ್ ಹಾಗೂ, ಯೋಗಾಸನದಲ್ಲಿ ಕಳೆಯುತ್ತಾರೆ. ಇತ್ತೀಚೆಗೆ ಪ್ರಖ್ಯಾತ ತರಬೇತುದಾರರಾದ ನಮ್ರಾತಾ ಪುರೋಹಿತ್ ಅವರ ಪಿಲೇಟ್ಸ್ ಸ್ಟುಡಿಯೊದಲ್ಲಿ ಕರೀನಾ ವರ್ಕೌಟ್​ ಮಾಡುತ್ತಿರುವ ಕೆಲವು ವೀಡಿಯೋಸ್​ ಮತ್ತು ಫೋಟೋಗಳನ್ನ ನಮ್ರಾತಾ ಪುರೋಹಿತ್ ತಮ್ಮಇನ್ಸ್​ಟಾಗ್ರಾಮ್ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಕರೀನಾ ಕಪೂರ್​ ಖಾನ್​ ಫಿಟ್ನೆಸ್​ ಸಿಕ್ರೇಟ್​

1. ದಿನನಿತ್ಯ ಪಿಲೆಟ್ಸ್ ಎಕ್ಸರ್ಸೈ ಜ್ ಮಾಡಿ
ಕರೀನಾ ಕಪೂರ್​ ಮಾಡುವ ಎಕ್ಸರ್ಸೈಜ್​​​​ಗಳಲ್ಲಿ ಪಿಲೆಟ್ಸ್​ ಕೂಡಾ ಒಂದು. ಪಿಲೆಟ್ಸ್​ ಅಂದರೆ ನಿಮ್ಮ ಕೋರ್ ಸ್ನಾಯುಗಳನ್ನು ಬಲಪಡಿಸುವ ಮತ್ತು ಟೋನಿಂಗ್​ಗೆ ಉತ್ತಮವಾದ ವ್ಯಾಯಾಮ. ಪ್ರತಿದಿನ ನಿಯಮಿತವಾಗಿ ಪಿಲೆಟ್ಸ್ ಎಕ್ಸರ್ಸೈಜ್ ಮಾಡುವುದರಿಂದ ಹೆಚ್ಚು ಕಾರ್ಯಪ್ರವೃತ್ತರಾಗಿರುತ್ತೀರಿ. ಈ ವ್ಯಾಯಾಮವು ನಿಮ್ಮನ್ನ ಉಲ್ಲಾಸದಾಯಕರನ್ನಾಗಿರಿಸುತ್ತದೆ.

2. ಉಸಿರಾಟ
ವ್ಯಾಯಾಮಕ್ಕೆ ಬಂದಾಗ ಉಸಿರಾಟ ಬಹಳ ಮುಖ್ಯ. ಉಚ್ವಾಸ ಮತ್ತು ನಿಶ್ವಾಸ ವ್ಯಾಯಾಮದಲ್ಲಿ ಬಹಳ ಮುಖ್ಯ. ಕ್ಯಾಲೊರಿಗಳನ್ನು ಬರ್ನ್ ಮಾಡಲು ನಿಮಗೆ ಆಮ್ಲಜನಕ ಅವಶ್ಯಕವಾಗಿರುತ್ತದೆ.

3. ವ್ಯಾಯಾಮದ ನಡುವೆ ಹೆಚ್ಚು ವಿರಾಮ ತೆಗೆದುಕೊಳ್ಳದಿರಿ

ಯಾವುದೇ ವ್ಯಾಮಯಾವಾಗಲಿ ಹೆಚ್ಚು ವಿರಾಮಗಳನ್ನ ತೆಗೆದುಕೊಳ್ಳುವುದು ಒಳ್ಳೆಯದಲ್ಲ.ಇದು ಪೂರ್ಣ-ಶರೀರ ವ್ಯಾಯಾಮದಿಂದ ಹೆಚ್ಚು ಲಾಭ ಪಡೆಯಲು ಸಹಾಯ ಮಾಡುತ್ತದೆ.

4. ನಿಧಾನವಾಗಿ ವ್ಯಾಯಾಮ ಮಾಡಿ
ಪಿಲೆಟ್ಸ್ ಮಾಡುವ ಸಂದರ್ಭದಲ್ಲಿ ಹೆಚ್ಚಿನ ನಿಯಂತ್ರಣವನ್ನು ಹೊಂದಿರಬೇಕಾಗುತ್ತದೆ ಮತ್ತು ಅದು ಕಷ್ಟವಾಗಬಹುದು. ಆದರೆ ನಿಧಾನವಾಗಿ ಪಿಲೆಟ್ಸ್ ಮಾಡುವುದರಿಂದ ನಿಮ್ಮ ಸ್ನಾಯುವಿನ ಬಲ ಹೆಚ್ಚಾಗುತ್ತದೆ ಮತ್ತು ಜಾಯಿಂಟ್​ ಚಲನೆಗೆ ಸಹಾಯ ಮಾಡುತ್ತದೆ.

5. ವ್ಯಾಯಾಮದಲ್ಲಿ ತಾಳ್ಮೆ ತುಂಬಾ ಮುಖ್ಯ
ಪಿಲೆಟ್ಸ್ ವ್ಯಾಯಾಮ ಕೆಲವೊಬ್ಬರಿಗೆ ದೊಡ್ಡ ಸವಾಲಿನಂತೆ ಎನಿಸಬಹುದು. ಆದರೆ ಈ ವ್ಯಾಯಾಮವನ್ನ ಶ್ರದ್ಧೆಯಿಂದ ನೀವು ಮಾಡಿದಲ್ಲಿ ಉತ್ತಮ ಫಲಿತಾಂಶವನ್ನ ಪಡೆಯುತ್ತೀರಿ . ಆದರೆ ನಿಮ್ಮ ಗುರಿಯನ್ನ ಸಾಧಿಸಲು ಪಿಲೆಟ್ಸ್​ ಅಭ್ಯಾಸದಲ್ಲಿ ನೀವು ತಾಳ್ಮೆಯಿಂದ ಇರುವುದು ತುಂಬಾ ಅವಶ್ಯಕ.

Comments are closed.