ಗಲ್ಫ್

ದುಬೈಯಲ್ಲಿ ನಡೆದ ಕನ್ನಡಿಗರು ದುಬೈಯ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಟ ರವಿಚಂದ್ರನ್’ಗೆ ‘ಕನ್ನಡ ಕಲಾರತ್ನ’-ಮೋಹನ್ ಆಳ್ವಗೆ ‘ಕನ್ನಡ ರತ್ನ’ ಪ್ರಶಸ್ತಿ ಪ್ರದಾನ

Pinterest LinkedIn Tumblr

ದುಬೈ: ಕನ್ನಡಿಗರು ದುಬೈ ಇವರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ-2018 ನವಂಬರ್ 9ರಂದು ದುಬೈಯ ಕ್ರೆಡಿಯನ್ಸ್ ಹೈಸ್ಕೂಲ್ ಸಭಾಂಗಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ದುಬಾಯಿ :ಕನ್ನಡಿಗರು ದುಬೈ ಅಧ್ಯಕ್ಷರಾದ ಶ್ರೀ ಸದನ್ ದಾಸ್ ಅವರ ನೇತೃತ್ವದಲ್ಲಿ ಸಂಜೆ ಕ್ಕೆ ಪ್ರಾರಂಭವಾದ ಈ ಸಮಾರಂಭಕ್ಕೆ ಸಾಂಪ್ರದಾಯಿಕ ಪೂರ್ಣಕುಂಭ ಸ್ವಾಗತದೊಂದಿಗೆ ಮುಖ್ಯ ಅತಿಥಿಗಳು ಹಾಗೂ ಆಹ್ವಾನಿತ ಗಣ್ಯರನ್ನು ಸ್ವಾಗತಿಸಿ ಸಭಾಂಗಣಕ್ಕೆ ಕರೆತರಲಾಯಿತ್ತು, ಮಾತೆರ್ ಸಾತ್ವಿಕ್ ಸುಮಧುರ ಕಂಠದಲ್ಲಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾದ ತಾಂಬೂಲ ಜ್ಯೋತಿಷಿ ಶ್ರೀ ಶ್ರೀ ರವಿ ಶಂಕರ್ ಗುರೂಜಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಯುಎಇ ರಾಷ್ಟ್ರ ಗೀತೆ, ಭಾರತೀಯ ರಾಷ್ಟ್ರೀಯ ಗೀತೆ ಹಾಗೂ ಕರ್ನಾಟಕ ನಾಡ ಗೀತೆಗೆ ಸಭಿಕರೆಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು .

ಕನ್ನಡಿಗರು ದುಬೈ ಅಧ್ಯಕ್ಷರಾದ ಶ್ರೀ ಸದನ್ ದಾಸ್ ಅವರು ಮುಖ್ಯ ಅತಿಥಿಗಳಿಗೆ ಹಾಗೂ ಸಮಾರಂಭಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಸ್ವಾಗತವನ್ನು ಕೋರಿದರು, ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವ,ಕನ್ನಡ ಚಲನಚಿತ್ರದ ಮೇರುನಟ ಶ್ರೀ ರವಿಚಂದ್ರನ್, ಅಕ್ಷರ ಸಂತ ಶ್ರೀ ಹಾಜಬ್ಬ, ಚಂದನವನ ನಿರೂಪಕಿ ಅಪರ್ಣ, ಕರ್ನಾಟಕ ಸರ್ಕಾರದ ಮಂತ್ರಿ ಶ್ರೀ ಯು ಟಿ ಖಾದರ್ , ಆರ್ ಸಿ ಗ್ರೂಪ್ ಆಫ್ ಹೋಟೆಲ್ಸ್ ಮಾಲೀಕರಾದ ಶ್ರೀ ರವೀಶ್ ಗೌಡ, ಎಮ್ ಸ್ಕ್ವೇರ್ ಎಂಜಿನೀರಿಂಗ್ ಮಾಲೀಕರಾದ ಶ್ರೀ ಮುಸ್ತಫಾ ಮತ್ತು ದುಬೈ ಕನ್ನಡ ರಾಜ್ಯೋತ್ಸವ – ಮುಖ್ಯ ನಿರ್ವಾಹಕರಾದ ಶ್ರೀ ಅರುಣ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

ಕನ್ನಡಿಗರು ದುಬೈ ಸಂಘವು ಪ್ರತೀ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗುರುತಿಸಿ ನೀಡುವ ಕನ್ನಡ ರತ್ನ ಪ್ರಶಸ್ತಿಯನ್ನು ಈ ಬಾರಿ ಆಳ್ವಾಸ್ ಎಜುಕೇಶನ್ ಸಂಸ್ಥೆಯ ಸ್ಥಾಪಕರಾದ ಡಾ. ಮೋಹನ್ಆಳ್ವ ಅವರಿಗೆ ನೀಡಿ ಗೌರವಿಸಲಾಯಿತ್ತು . ದುಬಾಯಿಯಲ್ಲಿ ಕನ್ನಡ ಸಂಘಗಳಿಗೆ ನೀಡುವ ಸಹಾಯ ಸಹಕಾರ ಪರಿಗಣಿಸಿ ಎಮ್ ಸ್ಕ್ವೇರ್ ಎಂಜಿನೀರಿಂಗ್ ಮಾಲೀಕರಾದ ಶ್ರೀ ಮುಸ್ತಫಾ ಮತ್ತು ದಂಪತಿಗಳಿಗೆ ಕನ್ನಡ ಕೌಸ್ತುಭ ಪ್ರಶಸ್ತಿಯನ್ನು ನೀಡಿ ಗರವಿಸಿತ್ತು, ಖ್ಯಾತ ನಿರೂಪಕಿ ಹಾಗೂ ಚಂದನವನದ ತಾರೆ ಶ್ರೀಮತಿ ಅಪರ್ಣ ದಂಪತಿಗಳನ್ನು ಗೌರವಿಸಲಾಯಿತ್ತು, ಹಾಗೇ ಶ್ರೀ ರವಿಶಂಕರ್ ಗುರೂಜಿ , ಪ್ರಮುಖ ಹಾಸ್ಯ ಕಲಾವಿಧ ಶ್ರೀ ನಾಗರಾಜ್ ಕೋಟೆಯವರನ್ನು ಸನ್ಮಾಸಿಲಾಯಿತ್ತು, ಈ ಬಾಯಾರಿಯ ವಿಶೇಷ ಅತಿಥಿಯಾಗಿ ಆಗಮಿಸಿದ ಬುಟ್ಟಿಯಲ್ಲಿ ಕಿತ್ತಳೆ ಮಾರಿ ಬರುವ ಹಣದಿಂದ ಶಾಲೆಯನ್ನು ಕಟ್ಟಿಸಿದ ಅಕ್ಷರ ಸಂತ , ಅಕ್ಷರ ದೂತ ಎಂದೆಲ್ಲ ಬಿರುದನ್ನು ಪಡೆದಿರುವ ಶ್ರೀ ಹರೇಕಲ ಹಾಜಬ್ಬ ಅವರ ಸಮಾಜಮುಖಿ ಕೆಲಸವನ್ನು ಗುರುತಿಸಿ ಅವರನ್ನು ಗೌರವಿಸಲಾಯಿತ್ತು ಹಾಗೆ ಕನ್ನಡ ಚಿತ್ರ ರಂಗವನ್ನು ಮೇಲೇರಿಸಿದ ಕ್ರೇಝಿ ಸ್ಟಾರ್ ಎಂದೇ ಗುರುತಿಸುವ ಶ್ರೀ ರವಿ ಚಂದ್ರನ್ ಅವರಿಗೆ ಕನ್ನಡ ಕಾಲ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದರು .

ಕನ್ನಡ ಚಲನ ಚಿತ್ರ ಲೋಕದಲ್ಲಿ ಮಿಂಚಿ ಮರೆಯಾದ ಅದ್ಬುತ ಪ್ರತಿಭೆ ದಿವಂಗತ ಶ್ರೀ ಶಂಕರ್ ನಾಗ್ ಅವರ ಹುಟ್ಟು ಹಬ್ಬವನ್ನು ವೇದಿಕೆಯ ಮೇಲೆ ಶಂಕರ್ ನಾಗ್ ಅವರ ಬಾವಚಿತ್ರ ಮತ್ತು ಕನ್ನಡ ಧ್ವಜ ಇರುವ ಕೇಕ್ ವೇದಿಕೆಯಲ್ಲಿ ಕತ್ತರಿಸಿ ಅವರ ಹುಟ್ಟುಹಬ್ಬವನ್ನು ಸಮಸ್ತ ದುಬಾಯಿ ಕನ್ನಡಿಗರು ಆಚರಿಸಿದ್ದು ವಿಶೇಷವಾಗಿತ್ತು .

ತದನಂತರ ಯುಎಇ ದೇಶದಲ್ಲಿ ನೆಲಸಿರುವ ಕನ್ನಡ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತ್ತು. ತದನಂತರ ಹಾಸ್ಯ ಕಲಾವಿದರಾದ ನಾಗರಾಜ್ ಕೋಟೆ ಅವರಿಂದ ಹಾಸ್ಯ ಕಾಯಕ್ರಮ ನೆರೆದ ಪ್ರೇಕ್ಷಕರನ್ನು ನಗೆಗಾಡಿನಲ್ಲಿ ತೇಲಿಸಿದರು. ದುಬೈಯ ಹೆಸರಾಂತ ಉದ್ಯಮಿ, ಗಾಯಕ ಹರೀಶ್ ಶೇರಿಗಾರ್ ಸೇರಿದಂತೆ ಹಲವು ಗಾಯಕರಿಂದ ಕನ್ನಡ ಹಾಡುಗಳು , ನ್ರತ್ಯ, ಭರತ ನಾಟ್ಯ, ಯಕ್ಷಗಾನ ಮುಂತಾದ ಕಾರ್ಯಕ್ರಮಗಳನ್ನು ಯುಎಇ ದೇಶದಲ್ಲಿ ನೆಲಸಿರುವ ಸಾವಿರಾರು ಕನ್ನಡಿಗರು ಆನಂದಿನಿಸಿ ಕನ್ನಡಮ್ಮನ ಹಬ್ಬವನ್ನು ಕಣ್ತುಂಬಿಸಿಕೊಂಡರು .

ಶ್ರೀಮತಿ ಭಾಗ್ಯ ಸದನ್ ದಾಸ್ ಮತ್ತು ಶ್ರೀಮತಿ ವಿಜಯ ಶಿವರುದ್ರಪ್ಪ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚ ಕನ್ನಡದ ಶಬ್ದಗಳಿಂದ ಬಹಳ ಅಚ್ಚುಕಟ್ಟಾಗಿ ನೆರೆವೇರಿಸಕೊಟ್ಟರು, ಕನ್ನಡಿಗರು ದುಬಾಯಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಗೌಡ ಅವರು ಆಗಮಿಸಿದ ಅತಿಥಿಗಳಿಗೆ, ಸಭಿಕರಿಗೆ, ಪ್ರಯೋಜಕರಿಗೆ , ಮಾಧ್ಯಮ ಮಿತ್ರರಿಗೆ ಹಾಗೂ ಕಾರ್ಯಕ್ರಮ ಯಶಸ್ವಿಯಾಗಲು ಪ್ರಯತ್ನಿಸಿದ ಎಲ್ಲರಿಗೂ ವಂದನಾರ್ಪಣೆಯನ್ನು ಸೂಚಿಸಿದರು.

ಕಾರ್ಯಕ್ರಮದ ಯಶಸ್ವಿಗೆ ತಮ್ಮ ಕೆಲಸದ ಒತ್ತಡ ನಡುವೆಯೂ ಕನ್ನಡಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ವ್ಯಸಿದ ಕನ್ನಡಿಗರು ದುಬೈ ಅಧ್ಯಕ್ಷರಾದ ಶ್ರೀ ಸದನ್ ದಾಸ್, ಮಾಜಿ ಅಧ್ಯಕ್ಷರುಗಳಾದ ಶ್ರೀ ವೀರೇಂದ್ರ ಬಾಬು, ಶ್ರೀಮತಿ ಉಮಾ ವಿಧ್ಯಾದರ್, ಶ್ರೀ ಮಲ್ಲಿಕಾರ್ಜುನ ಗೌಡ ಅವರೊಂದಿಗೆ ದುಬೈ ಕನ್ನಡ ರಾಜ್ಯೋತ್ಸವದ ಮುಖ್ಯ ನಿರ್ವಹಣಾ ಸಂಯೋಜಕರಾದ ಶ್ರೀ ಅರುಣ್ ಕುಮಾರ್ ಎಂ ಕೆ ಬೆಂಗಳೂರು, ಶ್ರೀ ದೀಪಕ್ ಸೋಮಶೇಖರ್, ಶ್ರೀಮತಿ ವಿಜಯ ಶಿವರುದ್ರಪ್ಪ, ಮತ್ತು ಕನ್ನಡಿಗರು ದುಬೈ ಸಮಿತಿ ಸದಸ್ಯರುಗಳಾದ ಶ್ರೀಮತಿ ಮಮತಾ ರಾಘವೇಂದ್ರ, ಶ್ರೀ ಮಲ್ಲಿಕಾರ್ಜುನ ಅಂಗಡಿ, ಚಂದ್ರಕಾಂತ್, ಶ್ರೀನಿವಾಸ್ ಅರಸ್, ವೆಂಕಟರಮಣ ಕಾಮತ್, ರಫೀಕಲಿ ಕೊಡಗು, ವಿನೀತ್ ಹಾಗೂ ದುಬೈ ಕನ್ನಡ ರಾಜ್ಯೋತ್ಸವ – 2018 ಇದರ ಉಪ ಸಮಿತಿ ಸದಸ್ಯರುಗಳಾದ ಮಧು ಬೆಂಗಳೂರು , ಮಮತಾ ಬೆಂಗಳೂರು , ಹಾದಿಯ ಮಂಡ್ಯ , ಅನಿತಾ ಶಾರ್ಜ, ಸರೋಜಾ , ಪ್ರೀತಿ , ಸುಧಾ ಮುಂತಾದವರಿಗೆ ದುಬೈ ಕನ್ನಡ ರಾಜ್ಯೋತ್ಸವ ಮುಖ್ಯ ನಿರ್ವಾಹಕರಾದ ಶ್ರೀ ಅರುಣ್ ಕುಮಾರ್ ಎಂ ಕೆ ಬೆಂಗಳೂರು ಅವರು ಧನ್ಯವಾದಗಳನ್ನು ತಿಳಿಸಿದರು.

Comments are closed.