
ಮಂಗಳೂರು : ಕದ್ರಿ ಶ್ರೀ ಮಂಜುನಾಥ ದೇವರ ಬ್ರಹ್ಮಕಲಶೋತ್ಸವ ಸಮಿತಿ ಅಶ್ರಯದಲ್ಲಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ 2019ನೇ ಸಾಲಿನಲ್ಲಿ ಜರಗಲಿರುವ ಶ್ರೀ ಮಂಜುನಾಥ ದೇವರ ಬ್ರಹ್ಮಕಲಶೋತ್ಸವದ ಅಂಗವಾಗಿ ಸ್ಥಾಪಿಸಲಾಗಿರುವ ಹುಂಡಿ ಹಾಗೂ ವಿಶೇಷ ಸೇವಾ ಕೌಂಟರನ್ನು ಸೋಮವಾರ ಬೆಳಗ್ಗೆ ಉದ್ಘಾಟಿಸಲಾಯಿತು.
ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಜೆ. ಶೆಟ್ಟಿಯವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರಗಿತು. ಕದ್ರಿ ಶ್ರೀ ಮಂಜುನಾಥದೇವರ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೇಯರ್ ಭಾಸ್ಕರ್, ಶಶಿಧರ್ ಹೆಗ್ಡೆ, ಅಶೋಕ್‌ಡಿ.ಕೆ.,ರೂಪಾ ಡಿ. ಬಂಗೇರ, ಸುಂದರ್ ಶೆಟ್ಟಿ, ಸುಧಾಕರ್‌ರಾವ್ ಪೇಜಾವರ್, ವಿಠಲ ದಾಸತಂತ್ರಿ, ರಾಮಣ್ಣ ಅಡಿಗ, ರಾಘವೇಂದ್ರ ಭಟ್, ರತ್ನಾಕರ ಜೈನ್, ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಹಾಗೂ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.
Comments are closed.