
ಮಂಗಳೂರು : ಸರಳ ಸಜ್ಜನ ರಾಜಕಾರಣಿ ಭಾರತ ಸರಕಾರದ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಅನಂತ್ ಕುಮಾರ್ ರವರ ನಿಧಾನಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಸಜ್ಜನ ರಾಜಕಾರಣಿಯಾಗಿದ್ದ ಶ್ರೀಯುತರ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಶ್ರೀಯುತರನ್ನು ಕಳೆದುಕೊಂಡ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೂ, ಕಾರ್ಯಕರ್ತ ಬಂಧುಗಳಿಗೂ ಹಾಗೂ ಅಭಿಮಾನಿಗಳಿಗೂ ನೀಡಲಿ ಎಂದು ಕ್ಯಾಪ್ಟನ್ ಕಾರ್ಣಿಕ್ ರವರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.


ಪ್ರದೀಪ ಕುಮಾರ ಕಲ್ಕೂರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್
ಸಚಿವ ಅನಂತಕುಮಾರ್ ನಿಧನಕ್ಕೆ ಕಲ್ಕೂರ ಸಂತಾಪ :
ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದ ಅನಂತ ಮಾರ್‌ಅವರ ನಿಧನಕ್ಕೆದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷಎಸ್. ಪ್ರದೀಪ ಕುಮಾರ ಕಲ್ಕೂರ ತಮ್ಮತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪೇಜಾವರ ಶ್ರೀ ಗಳ ಪರ್ಯಾಯ ಸಂದರ್ಭದಲ್ಲಿ ಜರಗಿದ ರಾಷ್ಟ್ರೀಯ ಕನಕ ಜಯಂತ್ಯುತ್ಸವದ ಯಶಸ್ಸಿನಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದುಕೊಂಡು ಪಾಲ್ಗೊಂಡಿರುವುದನ್ನು ಸ್ಮರಿಸಿರುವ ಕಲ್ಕೂರ ಅನಂತ್ ಅವರು ವಿದ್ಯಾರ್ಥಿದೆಸೆಯಿಂದಲೇ ಹೋರಾಟ ಮನೋಭಾವದವರಾಗಿದ್ದರು. ಅವರ ಅಗಲಿಕೆಯಿಂದ ಕರ್ನಾಟಕದ ಓರ್ವ ಸಾಧನಾ ಶೀಲ ರಾಜಕೀಯ ಮುತ್ಸದ್ಧಿಯನ್ನು ಹಾಗೂ ಸ್ನೇಹಶೀಲ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದಿರುವರು.
ಬ್ರಾಹ್ಮಣದಒಕ್ಕೂಟದ ಸಂತಾಪ:
ವಿಪ್ರ ಸಂಘಟನೆಯಲ್ಲಿ ಮಹತ್ವಪೂರ್ಣ ಮಾರ್ಗದರ್ಶನ ನೀಡಿರುವ ಅನಂತ ಕುಮಾರ್‌ಅವರಿಂದ ವಿವಿಧ ಮಠ ಮಾನ್ಯಗಳಿಗೆ ಅನನ್ಯವಾದ ಕೊಡುಗೆ ಲಭಿಸಿದ್ದು . ಬ್ರಾಹ್ಮಣ ಒಕ್ಕೂಟವುಅ ನಂತ್ ಅವರ ನಿಧನಕ್ಕೆ ಸಂತಾಂಪವನ್ನು ಸಲ್ಲಿಸಿದೆ.
Comments are closed.