
ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಕನ್ನಡ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದರೊಂದಿಗೆ ಕನ್ನಡ ಚಿತ್ರರಂಗವು ಇಡೀ ದೇಶದ ಗಮನ ಸೆಳೆಯುತ್ತಿದೆ. ಶಿವರಾಜಕುಮಾರ್, ಸುದೀಪ್ ಅಭಿನಯದ ದಿ ವಿಲನ್ ಸಿನಿಮಾ ಕೂಡ ಬಿಗ್ ಬಜೆಟ್ ಮೂಲಕ ಗಮನ ಸೆಳೆದಿತ್ತು. ಬಿಡುಗಡೆಗೆ ಬಹುತೇಕ ಸಿದ್ಧರಾಗಿರುವ ಕುರುಕ್ಷೇತ್ರ ಕೂಡ ಬಹುದೊಡ್ಡ ಬಜೆಟ್ನ ಚಿತ್ರ. ಈ ಮೂರು ಸಿನಿಮಾಗಳು ಕನ್ನಡ ಸಿನಿಮಾಕ್ಕೆ ಹೊಸ ಭಾಷ್ಯ ಬರೆದಿವೆ. ಕೆಜಿಎಫ್ ಸಿನಿಮಾವಂತೂ ತನ್ನ ಟ್ರೇಲರ್ ಮೂಲಕ ಈಗಾಗಲೇ ಅತೀ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕೋಲಾರ್ ಗೋಲ್ಡ್ ಫೀಲ್ಡ್ನ ಮೈನಿಂಗ್ ಪ್ರದೇಶದಲ್ಲಿ ನಡೆಯುವ ಕಥೆ ಇರುವ ಈ ಸಿನಿಮಾ ಐದು ಭಾಷೆಗಳಲ್ಲಿ ನಿರ್ಮಾಣವಾಗಿದೆ. ರವಿಚಂದ್ರನ್ ಅವರ ಶಾಂತಿ ಕ್ರಾಂತಿ ನಂತರ ಕನ್ನಡದ ಚಿತ್ರವೊಂದು ಐದು ಭಾಷೆಗಳಲ್ಲಿ ನಿರ್ಮಾಣವಾಗಿದ್ದಿಲ್ಲ. ಕೆಜಿಎಫ್ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಬಜೆಟ್ ಬರೋಬ್ಬರಿ 80 ಕೋಟಿ ಎನ್ನಲಾಗಿದೆ. ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದ ಬಜೆಟ್ ಎಷ್ಟು ಎಂದು ಇನ್ನೂ ಫೈನಲ್ ಆಗಿಲ್ಲವಾದರೂ ಸುಮಾರು 65 ಕೋಟಿ ಎಂದು ಅಂದಾಜಿಸಲಾಗಿದೆ. ಕುರುಕ್ಷೇತ್ರದ ಶೂಟಿಂಗ್ ಪೂರ್ಣಗೊಂಡರೆ ಅದರ ಬಜೆಟ್ ಎಷ್ಟು ಎಂಬುದು ಗೊತ್ತಾಗುತ್ತದೆ.
ಇದೇ ವೇಳೆ, ಕೆಜಿಎಫ್ ಸಿನಿಮಾದ ಇತರ ಭಾಷೆಗಳ ಟ್ರೇಲರ್ಗೂ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಕನ್ನಡದ ಟ್ರೇಲರ್ ನೋಡಿದ ವೀಕ್ಷಕರ ಸಂಖ್ಯೆ ಒಂದೇ ದಿನದಲ್ಲಿ ಸುಮಾರು 60 ಲಕ್ಷ ಸಮೀಪಕ್ಕೆ ಹೋಗಿದೆ. ಹಿಂದಿ ಟ್ರೇಲರ್ಗೂ ಒಳ್ಳೆಯ ಸ್ಪಂದನೆ ಇದೆ.
ಕನ್ನಡದ ಟಾಪ್ ಬಜೆಟ್ ಚಿತ್ರಗಳು
1) ಕೆಜಿಎಫ್: 80 ಕೋಟಿ ರೂ.
2) ಕುರುಕ್ಷೇತ್ರ: 65 ಕೋಟಿ ರೂ.(ಅಂದಾಜು)
3) ದಿ ವಿಲನ್: 45 ಕೋಟಿ
4) ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ: 26 ಕೋಟಿ
5) ಮಾಣಿಕ್ಯ: 19 ಕೋಟಿ ರೂ.
6) ರಣ ವಿಕ್ರಮ: 15 ಕೋಟಿ ರೂ.
Comments are closed.