ಮನೋರಂಜನೆ

ಮಹಿಳೆಯ ಪಾವಿತ್ರ್ಯತೆ ಆಕೆಯ ಯೋನಿಯಲ್ಲಿಲ್ಲ ಎಂದ ನಟಿ ಪಾರ್ವತಿ

Pinterest LinkedIn Tumblr

ತಿರುವನಂತಪುರಂ: ಮೀಟೂ ಆರೋಪ ಮಾಡಿದ್ದ ನಟಿ ಪಾರ್ವತಿ ಅವರು ಇದೀಗ ಮಹಿಳೆಯ ಪಾವಿತ್ರ್ಯತೆ ಆಕೆಯ ಯೋನಿಯಲ್ಲಿಲ್ಲ ಎಂದು ಹೇಳಿದ್ದಾರೆ.

ಶಬರಿಮಲೆ ದೇಗುಲಕ್ಕೆ ಮಹಿಳೆ ಪ್ರವೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು ಇದೀಗ ಸುಪ್ರೀಂ ತೀರ್ಪಿನ ಪರ ನಟಿ ಪಾರ್ವತಿ ಬ್ಯಾಟಿಂಗ್ ಮಾಡಿದ್ದಾರೆ.

ಸುಪ್ರೀಂ ತೀರ್ಪಿನ ನಂತರ ಕೆಲ ಮಹಿಳೆಯರು ದೇವಾಲಯ ಪ್ರವೇಶಿಸುವ ಯತ್ನ ಮಾಡಿ ವಿಫಲರಾಗಿದ್ದರು. ಇದಗೀ ಈ ಬಗ್ಗೆ ಪಾರ್ವತಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ತೀರ್ಪನ್ನು ಸ್ವಾಗತಿಸಿರುವ ಪಾರ್ವತಿ ಮುಟ್ಟಾಗುವುದರಿಂದಲೇ ಮಕ್ಕಳು ಜನಿಸುತ್ತಾರೆ. ಆದರೆ ಮುಟ್ಟಾದಾಗ ಅಪವಿತ್ರವೆಂದು ಯಾಕೆ ಪರಿಗಣಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಹಿಂದಿನಿಂದಲೂ ಕೂಡ ಮುಟ್ಟಾದಾಗ ಅಪವಿತ್ರಳು ಎಂಬ ಭಾವನೆಯನ್ನು ತಲೆಗೆ ತುಂಬಲಾಗಿದೆ. ಹೆಣ್ಣಿನ ಪಾವಿತ್ರ್ಯತೆ ಎನ್ನುವುದು ಕೇವಲ ಯೋನಿಯಲ್ಲಿಲ್ಲ ಎಂದು ಪಾರ್ವತಿ ಹೇಳಿದ್ದಾರೆ.

Comments are closed.