
ಭಾರತದಲ್ಲಿ ಪೋರ್ನ್ ವೆಬ್ಸೈಟ್ಗಳ ಬ್ಯಾನ್ ವಿಚಾರದಿಂದ ಮತ್ತೊಮ್ಮೆ ನೀಲಿ ಲೋಕದ ಅಂಕಿ ಅಂಶಗಳು ಹೊರ ಬರುತ್ತಿದೆ. 827 ಅಶ್ಲೀಲ ವಿಡಿಯೋಗಳನ್ನು ಹೊಂದಿರುವ ವೆಬ್ಸೈಟ್ಗಳನ್ನು ಬ್ಲಾಕ್ ಮಾಡುವಂತೆ ಇಂಟರ್ನೆಟ್ ಸೇವಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಸೂಚನೆ ನೀಡಿತ್ತು.
ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧಗಳ ಭಾರೀ ಚರ್ಚೆ ಹುಟ್ಟಿಕೊಂಡಿದೆ. ವಿಶ್ವದಲ್ಲೇ ಪೋರ್ನ್ ವೀಕ್ಷಣೆಯಲ್ಲಿ ಮೂರನೇ ಸ್ಥಾನ ಪಡೆದಿರುವ ಭಾರತದಲ್ಲಿ ಅಶ್ಲೀಲ ವೆಬ್ಸೈಟ್ಗಳನ್ನು ನಿರ್ಬಂಧಿಸಿದರೆ ಬ್ಲೂ ಫಿಲಂ ಮಾರುಕಟ್ಟೆಗೆ ಭಾರೀ ಹೊಡೆತ ಬೀಳಲಿದೆ ಎಂಬ ಲೆಕ್ಕಾಚಾರಗಳು ಪ್ರಾರಂಭವಾಗಿದೆ.
ಆದರೆ ಭಾರತಕ್ಕೂ ಮೊದಲು ಸಂಪೂರ್ಣ ಪೋರ್ನ್ ವೆಬ್ಸೈಟ್ ನಿಷೇಧಿಸಿದ ಕೀರ್ತಿ ಚೀನಾ ದೇಶದ ಪಾಲಾಗಿದೆ. ಈಗಾಗಲೇ 22 ಸಾವಿರಕ್ಕೂ ಹೆಚ್ಚಿನ ಅಶ್ಲೀಲ ವಿಡಿಯೋ ಸೈಟ್‌ಗಳನ್ನು ಚೀನಾದಲ್ಲಿ ಬ್ಲಾಕ್ ಮಾಡಲಾಗಿದೆ. ಅಚ್ಚರಿ ಎಂದರೆ ಕಳೆದ ಒಂದು ತಿಂಗಳಲ್ಲೇ ಬರೋಬ್ಬರಿ 4 ಸಾವಿರ ಪೋರ್ನ್ ವೆಬ್ಸೈಟ್ಗಳನ್ನು ಚೀನಾ ಸರ್ಕಾರ ನಿರ್ಬಂಧಿಸಿದೆ.
ಭಾರತದಲ್ಲೂ ಶೀಘ್ರದಲ್ಲೇ ಪೋರ್ನ್ ವೆಬ್ಸೈಟ್ ಬ್ಯಾನ್ ಆಗಲಿದ್ದು, ರಿಯಲನ್ಸ್ ಜೀಯೊ ಈಗಾಗಲೇ ಪೋರ್ನ್ ವೆಬ್ಸೈಟ್ನ್ನು ಬ್ಲಾಕ್ ಮಾಡಿದೆ. ಏರ್ಟೆಲ್, ವಡಫೋನ್ ಸೇರಿದಂತೆ ಎಲ್ಲ ಸಿಮ್ ನೆಟ್ವರ್ಕ್ನಲ್ಲಿ ಅಶ್ಲೀಲ ವಿಡಿಯೋಗಳ ವೆಬ್ಸೈಟ್ಗಳನ್ನು ಶೀಘ್ರದಲ್ಲೇ ನಿರ್ಬಂಧಿಸಲಾಗುತ್ತದೆ ಎನ್ನಲಾಗಿದೆ. ಇತ್ತೀಚೆಗೆ ಉತ್ತರಾಖಂಡ ಹೈಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳಿಗೆ ಪೋರ್ನ್ ವೆಬ್ಸೈಟ್ ಬ್ಯಾನ್ ಮಾಡುವಂತೆ ಸರ್ಕಾರ ಸೂಚಿಸಿದೆ.
Comments are closed.