ಕರಾವಳಿ

ದ.ಕ.ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ; ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

Pinterest LinkedIn Tumblr

ಮಂಗಳೂರು, ನವೆಂಬರ್.01: ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಸಮಾರಂಭ ನಗರದ ಕೇಂದ್ರ ಮೈದಾನದಲ್ಲಿ ಗುರುವಾರ ಬೆಳಗ್ಗೆ ಜರಗಿತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಧ್ವಜಾರೋಹಣ ನೆರವೇರಿಸಿ ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಹಾಗೂ ಸಂಘ-ಸಂಸ್ಥೆಗಳಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯೋತ್ಸವ ಪ್ರಶಸ್ತಿ ಪಡೆದವರ ವಿವರ :

ಕುಮಾರ್ ಪೆರ್ನಾಜೆ – ಕೃಷಿ
ಶೇಖರ ಭಂಡಾರಿ-ಸಾಹಿತ್ಯ
ಬೊಂಡಾಲ ಸಚ್ಚಿದಾನಂದ ಶೆಟ್ಟಿ – ಶಿಕ್ಷಣ
ಪಿ.ಎಂ ಹಸನಬ್ಬ ಮೂಡಬಿದ್ರೆ– ಸಂಗೀತ
ದಿನಕರ ಇಂದಾಜೆ- ಪತ್ರಿಕೋದ್ಯಮ
ಲಕ್ಷಣ ಕುಂದರ್ – ಪತ್ರಿಕೋದ್ಯಮ
ವಿದ್ವಾನ್ ಶ್ರಾವಣ್ ಉಳ್ಳಾಲ– ನೃತ್ಯ
ನಾಗೇಶ್ ಎ-ಕ್ರೀಡೆ
ಮಾಸ್ಟರ್ ಮುಹಮ್ಮದ್ ಶಾಮಿಲ್ ಅರ್ಷದ್ – ಕ್ರೀಡೆ
ಜಾನ್ ಚಂದ್ರನ್-ಲಲಿತಕಲೆ
ಸದಾಶಿವ ಅಮೀನ್-ಲಲಿತಕಲೆ
ಚಂದ್ರಶೇಖರ ನಾಣಿಲ್-ಸಮಾಜ ಸೇವೆ
ಡಾ. ಐ ಶಶಿಕಾಂತ್ ಜೈನ್ – ಸಮಾಜ ಸೇವೆ(ಯೋಗ)
ಶಂಕರ ಬಿ.ಶೆಟ್ಟಿ ವಿರಾರ್ – ಸಮಾಜ ಸೇವೆ
ಕುರ್ನಾಡು ಶಿವಣ್ಣ ಆಚಾರ್ಯ –ಜಾನಪದ
ಗೋಪಾಲ ಶಿಬರೂರು-ಜಾನಪದ
ಡಾ. ಮನೋರಮ ರಾವ್-ವೈದ್ಯಕೀಯ
ಡಾ. ದಿನೇಶ್ ಕದಂ – ವೈದ್ಯಕೀಯ

ಸಂಘ ಸಂಸ್ಥೆಗಳು :

ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು, ಸುಳ್ಯ – ಸಮಾಜಸೇವೆ
ಬಿಲ್ಲವ ಸೇವಾ ಸಮಾಜ (ರಿ) ಕಂಕನಾಡಿ ಗರೋಡಿ-ಸಮಾಜ ಸೇವೆ
ಮಾತಾ ಅಮೃತಾನಂದಮಯಿ ಸೇವಾ ಸಮಿತಿ, ಸುಲ್ತಾನ್ ಬತ್ತೇರಿ-ಸಮಾಜ ಸೇವೆ
ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್(ರಿ) ಕದ್ರಿ-ಸಮಾಜ ಸೇವೆ
ತಣ್ಣೀರು ಬಾವಿ ಮುಳುಗು ತಜ್ಞರ ತಂಡ, ತಣ್ಣೀರು ಬಾವಿ-ಸಮಾಜ ಸೇವೆ
ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ – ಸಮಾಜಸೇವೆ
ಮದರ್ ಥೆರೆಸಾ ಹೋಂ ಫಾರ್ ದ ಡೈಯಿಂಗ್ ಡೆಸ್ಟಿಟ್ಯೂಸ್ ಫಳ್ನೀರ್- ಸಮಾಜಸೇವೆ

2018ರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

 

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ಮೇಯರ್ ಕೆ.ಭಾಸ್ಕರ್ ಮೊಯ್ಲಿ, ಉಪಮೇಯರ್ ಕೆ.ಮುಹಮ್ಮದ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಲ್ಲಾ ಎಸ್ಪಿರವಿಕಾಂತೇ ಗೌಡ, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ನಗರದ ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಮೆರವಣಿಗೆ ನಡೆಯಿತು.

Comments are closed.