ಕರ್ನಾಟಕ

ಜನಾರ್ದನ ರೆಡ್ಡಿ ಕ್ಷಮೆ ಕೇಳಿದ್ದಾರೆ, ಕ್ಷಮಿಸುವುದು ದೊಡ್ಡ ಗುಣ; ಸಿದ್ದರಾಮಯ್ಯ

Pinterest LinkedIn Tumblr


ಶಿವಮೊಗ್ಗ: ಸಿದ್ದರಾಮಯ್ಯ ಮಗನ ಸಾವಿನ ಕುರಿತು ರಾಜಕೀಯ ವಲಯದಲ್ಲಿ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಜನಾರ್ದನ ರೆಡ್ಡಿ ಸಿದ್ದರಾಮಯ್ಯ ಕ್ಷಮೆ ಕೋರಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕ್ಷಮಿಸುವುದು ದೊಡ್ಡ ಗುಣ. ಆದರೆ ನನ್ನ ಮಗನ ಸಾವಿನ ಬಗ್ಗೆ ಮಾತನಾಡಿರುವುದನ್ನು ಸಮಾಜದಲ್ಲಿ ಯಾರಾದಾರೂ ಸಹಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ

ಸಿದ್ದರಾಮಯ್ಯ ಹೇಳಿದ ತಕ್ಷಣವೇ ಯಾರನ್ನಾದರೂ ಜೈಲಿಗೆ ಕಳುಹಿಸಲು ಸಾಧ್ಯವೇ. ಅವರು ಜೈಲಿಗೆ ಹೋಗಿರುವುದು ಅವರು ಮಾಡಿದ ಅಕ್ರಮದಿಂದ. ಜನಾರ್ದನ ರೆಡ್ಡಿ ಸಂಸ್ಕೃತಿ, ಮಾನವೀಯತೆ ಗೊತ್ತಿಲ್ಲದ ವ್ಯಕ್ತಿ. ಕ್ರಿಮಿನಲ್ ಆಗಿ ಯೋಚನೆ ಮಾಡುವ ವ್ಯಕ್ತಿಗೆ ಅದೇ ರೀತಿಯ ಯೋಚನೆಗಳು ಬರುತ್ತದೆ. ಚುನಾವಣೆ ವೇಳೆ ಟೀಕೆ ಆರೋಪಗಳನ್ನು ಮಾಡುತ್ತೇವೆ. ಆದರೆ, ವೈಯಕ್ತಿಕವಾಗಿ ಕುಟುಂಬವನ್ನು ಗುರಿಯಾಗಿಸುವುದು ಒಳ್ಳೆಯದಲ್ಲ ಎಂದರು.

ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ರಾಘವೇಂದ್ರ ಗೆದ್ದ ಮೇಲೆ ಸರ್ಕಾರ ಬದಲಾಗುತ್ತದೆ ಎನ್ನುತ್ತಾರೆ. ಇವರ ಬಳಿ ಏನಾದರೂ ಮಂತ್ರದಂಡ ಇದೆಯಾ. ಪ್ರತಿದಿನ ರಾತ್ರಿ ಯಡಿಯೂರಪ್ಪ ಕನಸಲ್ಲಿ ಮುಖ್ಯಮಂತ್ರಿ ಕುರ್ಚಿಯೇ ಕಾಣುತ್ತಿದೆ, ಬೀಳತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಶಿವಮೊಗ್ಗ ಹೋರಾಟದ ನೆಲ, ಇಲ್ಲಿನ ಮಣ್ಣಿನಲ್ಲಿ, ಇಲ್ಲಿನ ಜನರ ರಕ್ತದಲ್ಲಿ ಅಂತಹ ಹೋರಾಟದ ಕೆಚ್ಚು ಇದೆ. ಇದು ಕೇವಲ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆ ಎಂದು ತಿಳಿದುಕೊಳ್ಳಬೇಡಿ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯನ್ನು ಕಿತ್ತೊಗೆಯುವ ಹೋರಾಟ ಶಿವಮೊಗ್ಗದ ನೆಲದಿಂದಲೇ ಪ್ರಾರಂಭಗೊಳ್ಳಲಿ. ಈ ಮೂಲಕ ಬಿಜೆಪಿಯನ್ನು ಕರ್ನಾಟಕದಿಂದ ಹೊರಗಿಡಬೇಕು ಎಂದು ತಿಳಿಸಿದರು.

Comments are closed.