
ಛತ್ತೀಸ್ಗಢ: ‘ಅಮ್ಮಾ… ನಾನು ನಿನ್ನನ್ನು ಎಷ್ಟು ಇಷ್ಟಪಡುತ್ತೇನೆಂದು ನಿನಗೆ ಹೇಳಬೇಕು. ಐ ಲವ್ ಯು ಅಮ್ಮ. ನಾನೇನಾದರೂ ಇಲ್ಲಿಂದ ಬದುಕಿ ಬಂದರೆ ನಿನಗೆ ಹೇಳುವ ಮೊದಲ ಮಾತೇ ಇದು. ಆದರೆ, ನಾನು ಬದುಕಿ ಬರುತ್ತೇನೆಂಬ ನಂಬಿಕೆ ಉಳಿದಿಲ್ಲ…’
ನವೆಂಬರ್ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಛತ್ತೀಸ್ಗಢದ ದಂತೆವಾಡ ಜಿಲ್ಲೆಗೆ ಚುನಾವಣಾ ಕರ್ತವ್ಯದ ನಿಮಿತ್ತ ಹೋಗಿದ್ದ ದೂರದರ್ಶನದ ಕ್ಯಾಮೆರಾಮನ್ ಈ ರೀತಿ ಭಾವನಾತ್ಮಕ ವಿಡಿಯೋವೊಂದನ್ನು ಮೊಬೈಲ್ ಸೆಲ್ಫೀ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿ ತನ್ನ ಸಿಬ್ಬಂದಿಗೆ ಕಳುಹಿಸಿದ್ದಾರೆ. ಅದೃಷ್ಟವಶಾತ್ ಶರ್ಮ ಬದುಕಿಬಂದಿದ್ದು, ಅವರ ಸಹೋದ್ಯೋಗಿ ಅಚ್ಯುತಾನಂದ ಸಾಹು ಎಂಬ ಕ್ಯಾಮೆರಾಮನ್ ಸಾವನ್ನಪ್ಪಿದ್ದಾರೆ.
ಅರಾನ್ಪುರದ ನಿಲವಯ ಎಂಬ ಗ್ರಾಮದಲ್ಲಿ ಮಾವೋವಾದಿಗಳು ಚುನಾವಣಾ ಭದ್ರತಾ ಸಿಬ್ಬಂದಿಯ ಮೇಲೆ ದಾಳಿ ನಡೆಸಿದ್ದರು. ಬಳಿಕ, ಸುತ್ತಲೂ ನಕ್ಸಲರು ಸುತ್ತುವರೆದಾಗ ಕ್ಯಾಮೆರಾಮನ್ ಮುಕುತ್ ಶರ್ಮ ಅವರಿಗೆ ಅಪಾಯದ ಮುನ್ಸೂಚನೆ ಸಿಕ್ಕಿದೆ. ನಕ್ಸಲರಿಂದ ತಪ್ಪಿಸಿಕೊಳ್ಳಲು ಪೊಲೀಸರೊಂದಿಗೆ ಕ್ಯಾಮೆರಾ ಹೊತ್ತು ಓಡಿ ಸುಸ್ತಾಗಿ ಒಂದೆಡೆ ಕುಸಿದುಬಿದ್ದ ಶರ್ಮ ಅವರು ಪೊಲೀಸರ ಬಳಿ ಕುಡಿಯಲು ನೀರು ಕೊಡಿ ಎಂದು ಅಂಗಲಾಚಿದ್ದಾರೆ. ಆದರೆ, ಗುಂಡಿನ ದಾಳಿ ನಡೆಯುತ್ತಿದ್ದುದರಿಂದ ಎಲ್ಲಾದರೂ ಹೋಗಿ ನೀರು ತಂದುಕೊಡುವ ಸ್ಥಿತಿಯಲ್ಲೂ ಅವರು ಇರಲಿಲ್ಲ.
Comments are closed.