
ಬೆಂಗಳೂರು: ಮಾಡರ್ನ್ ಸ್ವಾಮಿ ಎಂದೇ ಕರೆಯಲ್ಪಡುವ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ನಿತ್ಯಾನಂದ ಸ್ವಾಮಿ ಮತ್ತು ಶಿಷ್ಯರ ವಿರುದ್ಧ ಆರತಿ ರಾವ್ ಎಂಬ ಮಹಿಳೆ ಸಿಐಡಿ ಸೈಬರ್ ಕ್ರೈಂ ಸ್ಟೇಷನ್ನಲ್ಲಿ ದೂರು ನೀಡಿದ್ದಾರೆ. ‘ನನ್ನ ಅಶ್ಲೀಲ ವಿಡಿಯೋವೊಂದನ್ನು ಯೂಟ್ಯೂಬ್ಗೆ ಹಾಕಿ ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಕರ್ಮಕಾಂಡ ಎಂಬ ಯೂಸರ್ ಐಡಿಯಿಂದ ವಿಡಿಯೋ ಅಪ್ಲೋಡ್ ಆಗಿದೆ. ಪೋರ್ನ್ಸ್ಟಾರ್ ಎಂಬ ಹೆಸರಿಟ್ಟು ವಿಡಿಯೋ ಹಾಕಿದ್ದಾರೆ’ ಎಂದು ಆರೋಪಿಸಿ ಆರತಿ ರಾವ್ ದೂರು ನೀಡಿದ್ದಾರೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಿತ್ಯಾನಂದ ಹಾಗೂ ಅವರ ಅನುಯಾಯಿಗಳೇ ಈ ಕೆಲಸ ಮಾಡಿದ್ದಾರೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆಯಾಗಿದೆ. ಆ ವಿಡಿಯೋ ಇಂಟರ್ನೆಟ್ನ ವಿವಿಧ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದನ್ನು ಪರಿಚಿತರೂ ನೋಡಿರುವುದರಿಂದ ತಲೆಯೆತ್ತಿ ತಿರುಗದಂತಹ ಪರಿಸ್ಥಿತಿ ಎದುರಾಗಿದೆ. ಕೆಲವರು ಆ ವಿಡಿಯೋ ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಆದಷ್ಟು ಬೇಗ ಆ ವಿಡಿಯೋವನ್ನು ಬ್ಲಾಕ್ ಮಾಡಿಸಿ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ನನಗೆ ನಿತ್ಯಾನಂದ ಅವರಿಂದ ಪ್ರಾಣಭೀತಿಯಿದೆ. ಅವರಿಂದ ನನಗೆ ರಕ್ಷಣೆ ಕೊಡಿ ಎಂದು ದೂರಿನಲ್ಲಿ ಮಹಿಳೆ ಮನವಿ ಮಾಡಿದ್ದಾರೆ.
ಮಹಿಳೆಯ ಅಶ್ಲೀಲ ವಿಡಿಯೊ ಪ್ರಕಟಿಸಿದ ಆರೋಪ (ಐಪಿಸಿ ಸೆಕ್ಷನ್ 354ಸಿ), ಸಂಜ್ಞೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ ತಂದ (509) ಆರೋಪಗಳಡಿ ಎಫ್ಐಆರ್ ದಾಖಲಿಸಲಾಗಿದೆ. ಇದೇ ಆರತಿ ರಾವ್ ಈ ಮೊದಲು ನಿತ್ಯಾನಂದನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಈ ಕುರಿತು ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಅಂದಹಾಗೆ, ನಿತ್ಯಾನಂದ ಸ್ವಾಮಿ ವಿರುದ್ಧ ಅತ್ಯಾಚಾರ, ಮಾನಹಾನಿ ದೂರು ದಾಖಲಾಗಿರುವುದು ಇದೇ ಮೊದಲೇನಲ್ಲ. 2010ರಲ್ಲಿ ನಟಿ ರಂಜಿತಾ ಕೂಡ ನಿತ್ಯಾನಂದ ಸ್ವಾಮಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದರು. ಇದು ದಾಖಲಾದ ನಂತರ ಅನೇಕರು ಮುಂದೆ ಬಂದು ತಮಗಾದ ಅನ್ಯಾಯವನ್ನು ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ನಿತ್ಯಾನಂದ ಸ್ವಾಮಿ ಜೈಲಿಗೂ ಹೋಗಿಬಂದಿದ್ದರು.
Comments are closed.