ಮನೋರಂಜನೆ

12 ವರ್ಷಗಳ ಹಿಂದೆ ನಟಿಸಿದ್ದ ಖ್ಯಾತ ನಟನ ಚಿತ್ರದೊಂದಿಗೆ ಮತ್ತೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ನಟಿ ರಮ್ಯಾ ! ಆ ನಟ ಯಾರು ಗೊತ್ತ!

Pinterest LinkedIn Tumblr

ಸ್ಯಾಂಡಲ್ವುಡ್ ನ ಕ್ವೀನ್ ರಮ್ಯಾ ನಾಲ್ಕು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದು 12 ವರ್ಷಗಳ ಹಿಂದೆ ನಟಿಸಿದ್ದ ಖ್ಯಾತ ನಟನ ಚಿತ್ರದಲ್ಲಿ ನಟಿಸುತ್ತಿದ್ದು ಆ ನಟ ಯಾರು ಅಂತಾ ಗೊತ್ತಾಗಿದೆ.

ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿರುವ ರಮ್ಯಾ ಅವರು ಮತ್ತೆ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ. ದರ್ಶನ್ ಅಭಿನಯದ ಐತಿಹಾಸಿಕ ಮದಕರಿ ನಾಯಕ ಚಿತ್ರದಲ್ಲಿ ರಮ್ಯಾ ನಟಿಸುತ್ತಾರೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಕೇಳಿಬರುತ್ತಿದೆ.

ದರ್ಶನ್ ಮತ್ತು ರಮ್ಯಾ 2006ರಲ್ಲಿ ತೆರೆ ಕಂಡಿದ್ದ ದತ್ತ ಚಿತ್ರದಲ್ಲಿ ಅಭಿನಯಿಸಿದ್ದರು. ಆ ನಂತರ ಈ ಇಬ್ಬರು ಒಟ್ಟಾಗಿ ಅಭಿನಯಿಸಿರಲಿಲ್ಲ. ಇದೀಗ ಐತಿಹಾಸಿಕ ಚಿತ್ರದ ಮೂಲಕ ರಮ್ಯಾ ಮತ್ತೆ ದರ್ಶನ್ ಜೊತೆ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ. ಚಿತ್ರ ಮುಂದಿನ ವರ್ಷ ಸೆಟ್ಟೇರುವ ಸಾಧ್ಯತೆ ಇದೆ.

ಚಿತ್ರವನ್ನು ಸ್ಯಾಂಡಲ್ವುಡ್ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡುತ್ತಿದ್ದು ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

Comments are closed.