ಮನೋರಂಜನೆ

ಅಪಹರಣ ಪ್ರಕರಣ: ಪಾನಿಪುರಿ ಕಿಟ್ಟಿ ಜೊತೆ ಮಾತುಕತೆಗೆ ಮುಂದಾದ ದುನಿಯಾ ವಿಜಿಯ ಮೊದಲ ಪತ್ನಿ ನಾಗರತ್ನ

Pinterest LinkedIn Tumblr

ಬೆಂಗಳೂರು: ಜಿಮ್​ ಟ್ರೈನರ್​ ಮಾರುತಿಗೌಡ ಅಪಹರಣ ಮತ್ತು ಹಲ್ಲೆ ನಡೆಸಿದ ಆರೋಪದಲ್ಲಿ ನಟ ದುನಿಯಾ ವಿಜಿ ಜೈಲು ಸೇರಿದ್ದಾರೆ. ಜಾಮೀನು ಸಿಗದ ಕಾರಣ ವಿಜಿ ಮಾನಸಿಕವಾಗಿ ಕುಗ್ಗಿದ್ದಾರೆ. ಈ ಮಧ್ಯೆ, ವಿಜಿಯ ಮೊದಲನೇ ಪತ್ನಿ ನಾಗರತ್ನ ರಾಜಿ ಸಂಧಾನಕ್ಕೆ ಮುಂದಾಗಿದ್ದು, ಪಾನಿ ಪುರಿ ಕಿಟ್ಟಿಯನ್ನು ಭೇಟಿಯಾಗಲು ನಾಗರತ್ನ ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಭೇಟಿ ಹಿಂದಿದೆಯಾ ರಾಜಿ ಕಸರತ್ತು..!
ವಿಜಿ ಪತ್ನಿ ನಾಗರತ್ನ, ನಿನ್ನೆಯಿಂದಲೂ ಜೈಲಿಗೆ ಆಗಿಂದಾಗ್ಗೆ ಭೇಟಿ ನೀಡುತ್ತಿದ್ದಾರೆ. ಇದರ ನಡುವೆ ಪಾನಿಪುರಿ ಕಿಟ್ಟಿಯ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ನಿನ್ನೆ ದುನಿಯಾ ವಿಜಿಯನ್ನು ಭೇಟಿಯಾಗಲು ಹೋಗಿದ್ದರು. ಆದರೆ, ವಿಜಿಯೇ ಪತ್ನಿಯ ಭೇಟಿಗೆ ನಿರಾಕರಿಸಿದ್ದರು. ಈ ಬೇಸರದ ನಡುವೆಯೂ ಪತಿಯನ್ನು ಜೈಲಿನಿಂದ ಪಾರು ಮಾಡಲು ನಾಗರತ್ನ ಹರಸಾಹಸ ಪಡ್ತಿದ್ದಾರೆ. ಈ ಪ್ರಯತ್ನವಾಗಿ, ಕಿಟ್ಟಿಯ ಮನವೊಲಿಸಲು ಆಸ್ಪತ್ರೆಗೆ ಬಂದಿದ್ದರು ಎಂದು ಆಪ್ತ ಮೂಲಗಳು ಹೇಳಿವೆ.

ಕೈ ಹಿಡಿಯಲಿದೆಯಾ ಹಳೆಯ ಬಾಂಧವ್ಯ..?
ಪಾನಿಪುರಿ ಕಿಟ್ಟಿ, ವಿಜಿಯ ಫ್ಯಾಮಿಲಿಗೆ ಹತ್ತಿರವಾಗಿದ್ದವರು. ನಾಗರತ್ನರಿಗೂ ಕಿಟ್ಟಿಗೂ ಹತ್ತಿರದ ಪರಿಚಯವಿದೆ. ಹೀಗಾಗಿ, ಖುದ್ದು ನಾಗರತ್ನ ಸಂಧಾನ ನಡೆಸಲು ಮುಂದಾಗಿದ್ದಾರೆ. ಇವತ್ತು ಕೂಡ ಮಾರುತಿಗೌಡ ದಾಖಲಾಗಿರೋ ವಿಕ್ರಂ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲದೇ, ಪಾನಿಪುರಿ ಕಿಟ್ಟಿಯನ್ನು ಮಾತನಾಡಿಸೋಕೆ ಪ್ರಯತ್ನಿಸಿದ್ದರು. ಹೀಗಾಗಿ ನಾಗರತ್ನ ಮಾತಿಗೆ ಕಿಟ್ಟಿ ಮಣಿಯುತ್ತಾರಾ? ಕಾದುನೋಡಬೇಕಿದೆ.

Comments are closed.