
ಕೇರಳ: ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೋ ಮುಳಕ್ಕಲ್ ಬಂಧನ ಆಗ್ರಹಿಸಿ ಕೊಚ್ಚಿಯಲ್ಲಿ ನಡೆದ ಕ್ರೈಸ್ತ ಸನ್ಯಾಸಿನಿಯರ ಪ್ರತಿಭಟನೆಯಲ್ಲಿ ಭಾಗವಹಿಸಿದ ಭಗಿನಿಯೊಬ್ಬರಿಗೆ ಚರ್ಚ್ ಕರ್ತವ್ಯದಿಂದ ದೂರವಿರುವಂತೆ ಸೂಚಿಸಿದ್ದು ಆಕ್ಷೇಪಕ್ಕೆ ಕಾರಣವಾಗಿದೆ.
ವಯನಾಡಿನ ಸಿರೋ ಮಲಬಾರ್ ಕ್ಯಾಥೊಲಿಕ್ ಚರ್ಚ್‌ಗೆ ಸೇರಿದ ಲೂಸಿ ಕಲಪುರ ಅವರಿಗೆ ಮದರ್ ಸುಪೀರಿಯರ್ ಅವರು ಮೌಖಿಕ ಆದೇಶ ನೀಡಿ, ಪ್ರಾರ್ಥನೆ, ತರಗತಿ ಸೇರಿದಂತೆ ಚರ್ಚ್ ಸಂಬಂಧಿ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಚಿಸಿದ್ದಾರೆ.
ಆದರೆ, ಏಕೆ ಕರ್ತವ್ಯದಿಂದ ದೂರ ಇರಬೇಕು ಎಂಬ ಬಗ್ಗೆ ಯಾವುದೇ ವಿವರಣೆ ನೀಡಿಲ್ಲ.
Comments are closed.