ರಾಷ್ಟ್ರೀಯ

ಮಮತಾ, ಮಾಯಾವತಿ, ಅಖಿಲೇಶ್​ ಗೆ ಆರ್​ಎಸ್​ಎಸ್​ ಕಾರ್ಯಕ್ರಮಕ್ಕೆ ಆಹ್ವಾನ

Pinterest LinkedIn Tumblr


ನವದೆಹಲಿ: ಸೆ.17ರಿಂದ 19ರವರೆಗೆ ಮೂರುದಿನಗಳ ಕಾಲ ದೆಹಲಿಯ ವಿಜ್ಞಾನ್​ ಭವನದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮ ನಡೆಯಲಿದೆ. ಇದಕ್ಕೆ ರಾಹುಲ್​ ಗಾಂಧಿ ಆಹ್ವಾನಕ್ಕೆ ತಯಾರಿ ನಡೆಸಿರುವ ವದಂತಿ ಬೆನ್ನಲ್ಲೆ, ಬಿಎಸ್​ಪಿ ನಾಯಕಿ ಮಾಯಾವತಿ ಹಾಗೂ ತೃಣಮೂಲ ಕಾಂಗ್ರೆಸ್​ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಯುಎನ್​ಐ ವರದಿ ಮಾಡಿದೆ.

ಅಷ್ಟೇ ಅಲ್ಲದೇ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್​ ಯಾದವ್​ ಅವರನ್ನು ಕೂಡ ಆಮಂತ್ರಿಸಲಾಗಿದೆ. ಮೂಲಗಳ ಪ್ರಕಾರ ಮೂರುದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಬಿಎಸ್​ಪಿ ನಾಯಕಿ ಭಾಗಿಯಾಗುವ ಸಾಧ್ಯತೆಗಳಿದ್ದು, ಈ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಅಖಿಲೇಶ್​ ಯಾದವ್​, ಮಮತಾ ಬ್ಯಾನರ್ಜಿ ಕೂಡ ದೆಹಲಿಗೆ ಪಯಣಿಸಲಿದ್ದು, ಆರ್​ಎಸ್​ಎಸ್​ ಮಹಾಸಭೆಯಲ್ಲಿ ಅವರು ಭಾಗಿಯಾಗುವುದರ ಬಗ್ಗೆ ಕೂಡ ಮಾಹಿತಿ ಲಭ್ಯವಾಗಿಲ್ಲ,

“ಭವಿಷ್ಯದ ಭಾರತ: ಆರ್​ಎಸ್​ಎಸ್​ ದೃಷ್ಟಿಕೋನ”ದಲ್ಲಿ ಎಂಬ ವಿಚಾರದ ಕುರಿತು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಉಪನ್ಯಾಸ ನೀಡಲಿದ್ದು, ಹಲವಾರು ವಿಚಾರಗಳ ಕುರಿತು ಅವರು ಮಾತನಾಡಲಿದ್ದಾರೆ.

ಚರ್ಚೆಯಾಗಲಿರುವ ಪ್ರಮುಖ ವಿಷಯ:

ಕಾರ್ಯಕ್ರಮದಲ್ಲಿ ಅಯೋಧ್ಯೆ ವಿವಾದದ ಕುರಿತು ಚರ್ಚೆ ಪ್ರಮುಖವಾಗಿ ಚರ್ಚೆಯಾಗಲಿದೆ. ಅಲ್ಲದೇ, ಗೋ ಹತ್ಯೆ ಬಗ್ಗೆಯೂ ಪ್ರಮುಖವಾಗಿ ಚರ್ಚೆ ಮತ್ತು ಅಭಿಪ್ರಾಯ ವ್ಯಕ್ತವಾಗಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಲೋಕ್​ ಕುಮಾರ್​ ತಿಳಿಸಿದ್ದಾರೆ.

ಇದರ ಹೊರತಾಗಿ ದೇಶದ ಕೃಷಿ, ಗ್ರಾಮೀಣ ಆರೋಗ್ಯ, ಆರ್ಥಿಕತೆ ಕುರಿತು ಚರ್ಚೆ ನಡೆಯಲಿದೆ.

ಬುಧವಾರ ಅತಿಥಿಗಳೊಂದಿಗೆ ಮಾತನಾಡಲಿರುವ ಭಾಗವತ್​:

ಈ ಕಾರ್ಯಕ್ರಮಕ್ಕೆ ಈಗಾಗಲೇ ಹಲವು ಪ್ರಮುಖ ನಾಯಕರನ್ನು ಆಮಂತ್ರಿಸಲಾಗಿದೆ. ಬಂದ ಅತಿಥಿಗಳೊಡನೆ ಕಾರ್ಯಕ್ರಮದ ಕೊನೆಯ ದಿನ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಲಿದ್ದಾರೆ. ಬಂದ ಅತಿಥಿಗಳು ಪ್ರಶ್ನೆಗಳನ್ನು ಬರೆದು ಅವರಿಗೆ ನೀಡಿದೆರೆ ಅದರಲ್ಲಿ ಕೆಲವೊಂದನ್ನು ಆಯ್ಕೆ ಮಾಡಿ ಅವರು ಉತ್ತರಿಸಲಿದ್ದಾರೆ.

ವಿಪಕ್ಷ ನಾಯಕರುಗಳ ಆಮಂತ್ರಣದ ಬಗ್ಗೆ ಕೇವಲ ಊಹಾಪೋಹಾಗಳು ಹರಿದಾಡುತ್ತಿದೆ. ಈ ಬಗ್ಗೆ ನಾವು ರಹಸ್ಯವನ್ನು ಕಾಪಾಡಿಕೊಂಡಿದ್ದೇವೆ ಎಂದು ಆರ್​ಎಸ್​ ನಾಯಕರು ತಿಳಿಸಿದ್ದಾರೆ.

ಅಧಿಕಾರಿ ವರ್ಗ, ವಿಜ್ಞಾನಿಗಳು, ಮಾಜಿ ಸೇವಾ ಮುಖ್ಯಸ್ಥರು, ಮತ್ತಿತ್ತರ ರಾಜಕೀಯ ಪಕ್ಷ ಸೇರಿದಂತೆ ಪ್ರತಿ ಕ್ಷೇತ್ರದಿಂದ 30 ಜನರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, 1000 ಜನರು ಸೇರುವ ನೀರಿಕ್ಷೆ ಇದೆ.

ಮಾಧ್ಯಮಗಳಿಗೆ ಆಹ್ವಾನ ನೀಡಲಾಗಿದ್ದು, ಕ್ಯಾಮೆರಾಗಳಿಗೆ ಪ್ರವೇಶ ವಿಲ್ಲ ಎಂದು ಹೇಳಲಾಗಿದೆ. ಇದೇ ಮೊದಲಬಾರಿಗೆ ಆರ್​ಎಸ್​ಎಸ್​ ಇಡೀ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ.

Comments are closed.