ಕ್ರೀಡೆ

ಕಾಂಗ್ರೆಸ್ ಕರೆ ನೀಡಿದ್ದ ‘ಭಾರತ್ ಬಂದ್’ಗೆ ಪತ್ನಿ ಜೊತೆ ಸಾಥ್ ನೀಡಿದ ಧೋನಿ ! ಇದು ಸತ್ಯವೇ…?

Pinterest LinkedIn Tumblr

ರಾಂಚಿ: ತೈಲ ದರ ಏರಿಕೆ ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ನಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ಜೊತೆ ಭಾಗಿಯಾಗಿದ್ದರೆ ಎಂಬ ಮಾತು ಕೇಳಿ ಬರುತ್ತಿದೆ.

ಇದಕ್ಕೆ ಪುಷ್ಠಿ ನೀಡುವಂತೆ ಪೆಟ್ರೋಲ್ ಬಂಕ್ ಮುಂದೆ ಸಾಕ್ಷಿ ಹಾಗೂ ಎಂಎಸ್ ಧೋನಿ ಕುಳಿತುಕೊಂಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ನಿಜವಾಗಲೂ ಅವರು ಭಾರತ್ ಬಂದ್ ನಲ್ಲಿ ಭಾಗಿಯಾಗಿದ್ದರೆ ಎಂಬುದು ಮಾತ್ರ ಖಚಿತಗೊಂಡಿಲ್ಲ.

ಇನ್ನು ಎಂಎಸ್ ಧೋನಿ ರಾತ್ರಿ ವೇಳೆಯಲ್ಲಿ ಪೆಟ್ರೋಲ್ ಪಂಪ್ ಮುಂದೆ ಕುಳಿತಿರುವ ಫೋಟೋ ಇದಾಗಿದೆ. ಅಲ್ಲದೆ ಭಾರತ್ ಬಂದ್ ವೇಳೆ ಎಂಎಸ್ ಧೋನಿ ತಮ್ಮ ರಾಂಚಿ ಮನೆಯಲ್ಲಿ ಇದ್ದರೂ ಎಂದು ತಿಳಿದುಬಂದಿದ್ದು ಅವರು ಯಾವುದೇ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ ಎನ್ನಲಾಗುತ್ತಿದೆ.

ಕೆಲ ಮಾಹಿತಿ ಪ್ರಕಾರ ಈ ಹಿಂದೆ ಎಂಎಸ್ ಧೋನಿ ಅವರು ತಮ್ಮ ಕುಟುಂಬಸ್ಥರೊಂದಿಗೆ ರಾತ್ರಿ ವೇಳೆ ಪೆಟ್ರೋಲ್ ಪಂಪ್ ಬಳಿ ಕುಳಿತುಕೊಂಡಿದ್ದರು ಎಂದು ಹೇಳಲಾಗಿದ್ದು ಇದೇ ಫೋಟೋವನ್ನು ಕೆಲವರು ಮಾಹಿ ಭಾರತ್ ಬಂದ್ ನಲ್ಲಿ ಭಾಗಿಯಾಗಿದ್ದರು ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆದರೆ, ಎಂಎಸ್ ಧೋನಿ ಯಾವ ಕಾರಣಕ್ಕೆ ರಾತ್ರಿ ವೇಳೆ ಪೆಟ್ರೋಲ್ ಪಂಪ್ ಮುಂದೆ ಕುಳಿತುಕೊಂಡಿದ್ದರು ಎಂಬುದು ಮಾತ್ರ ಖಚಿತಗೊಂಡಿಲ್ಲ.

Comments are closed.